ಸೋಮವಾರ, ಆಗಸ್ಟ್ 26, 2024

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಆ.26(ಕರ್ನಾಟಕ ವಾರ್ತೆ): ಇಲ್ಲಿನ ದೇವಿನಗರದ ಅಮೀರ್ ಎನ್ನುವ 31 ವರ್ಷದ ವ್ಯಕ್ತಿಯು ಆ.06 ರಂದು ನಮಾಜ್ ಮಾಡಲು ಮಸೀದಿಗೆ ಹೋಗಿಬರುತ್ತೇನೆ ಎಂದು ಹೋದವ ಮರಳಿಬಾರದೇ ಕಾಣೆಯಾಗಿರುತ್ತಾನೆ. ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5 ಅಡಿ 8 ಇಂಚು, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಾಣೆಯಾದ ಸಂದರ್ಭದಲ್ಲಿ ಲೇಟ್ ಪರ್ಪಲ್ ಚೇಕ್ಸ್ ಶರ್ಟ್ ಮತ್ತು ಬ್ಲೂ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಉರ್ದು, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‌ಬಜಾರ್ ಠಾಣೆ ಪಿ.ಐ ಮೊ.9480803047, ಪಿ.ಎಸ್.ಐ ಮೊ.9480803085 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ