ಗುರುವಾರ, ಡಿಸೆಂಬರ್ 26, 2024

ಅಪೂರ್ಣ ಅರ್ಜಿ ಪುನಃ ಭರ್ತಿಗೆ ಜ.05 ರವರೆಗೆ ಅವಕಾಶ

ಬಳ್ಳಾರಿ,ಡಿ.26(ಕರ್ನಾಟಕ ವಾರ್ತೆ): ಬಳ್ಳಾರಿ(ನಗರ) ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 64 ಅಂಗನವಾಡಿ ಸಹಾಯಕಿಯರ ಗೌರವಸೇವೆ ಹುದ್ದೆಗಳಿಗೆ ಆಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ ಕಾಲಾವಕಾಶ ಮುಗಿದಿದ್ದು, ಅಪೂರ್ಣವಾದ ಅರ್ಜಿಗಳನ್ನು ಪುನಃ ಭರ್ತಿ ಮಾಡಲು ಜ.05 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್‌ನಲ್ಲಿ ಒಟ್ಟು 4 ವಿವಿಧ ಹಂತಗಳಿದ್ದು, ಇದರಲ್ಲಿ ಕೆಲವರಿಗೆ 1ನೇ ಹಂತದಲ್ಲಿಯೇ ಅಪ್ಲಿಕೇಷನ್ ಸಕ್ಸಸ್‌ಪುಲ್ ಅಪ್‌ಲೋಡ್ ಎಂಬ ಮೆಸೇಜ್ ಅವರ ಮೊಬೈಲ್‌ಗೆ ಸ್ವೀಕೃತವಾಗಿರುವುದರಿಂದ ಅರ್ಜಿ ಪೂರ್ಣಗೊಳಿಸಿರುವುದಿಲ್ಲ. ಸರ್ಕಾರದ ಆದೇಶದನ್ವಯ ಅರ್ಜಿ ಸಲ್ಲಿಸುವ 4 ಹಂತಗಳನ್ನು ಪೂರ್ಣಗೊಳಿಸದೆ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜ.05 ರವರೆಗೆ ಅರ್ಜಿ ಪೂರ್ಣಗೊಳಿಸಲು ವೆಬ್‌ಸೈಟ್ ವಿಳಾಸ: hಣಣಠಿs://https://karnemakaone.kar.nic.in/adcd/ ಮೂಲಕ ಅವಕಾಶ ನೀಡಿ ಆದೇಶಿಸಲಾಗಿದೆ. ಅಭ್ಯರ್ಥಿಗಳು ಮೊದಲನೇ ಹಂತ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬುವುದು. 2ನೇ ಹಂತದಲ್ಲಿ ಭಾವಚಿತ್ರ ಮತ್ತು ಸಹಿ ಅಪ್‌ಲೋಡ್ ಮಾಡಬೇಕು. 3ನೇ ಹಂತದಲ್ಲಿ ದಾಖಲಾತಿ ಅಪ್ಲೋಡ್ ಮಾಡಬೇಕು. 4ನೇ ಹಂತ ಆಧಾರ್ ಸಂಖ್ಯೆ ನಮೂದಿಸಿ, ಇ-ಹಸ್ತಾಕ್ಷರಯೊಂದಿಗೆ ಅರ್ಜಿ ಪೂರ್ಣಗೊಳಿಸಬೇಕು. ಬಳ್ಳಾರಿ(ನಗರ)ದ ಅಂಗನವಾಡಿ ಸಹಾಯಕಿಯರ ಹುದ್ದೆಗೆ 259 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿವೆ ಅಪೂರ್ಣವಾದ ಅರ್ಜಿದಾರರ ಹೆಸರನ್ನು ಆಯಾ ಅಂಗನವಾಡಿ ಕೇಂದ್ರದಲ್ಲಿ ಲಭ್ಯವಿರುತ್ತದೆ, ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ತೆಗೆದುಕೊಂಡು ಅರ್ಜಿ ಪೂರ್ಣಗೊಳಿಸಬೇಕು ಎಂದು ಬಳ್ಳಾರಿ(ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ