ಶುಕ್ರವಾರ, ಡಿಸೆಂಬರ್ 13, 2024
ಅನಾಮಧೇಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಡಿ.13(ಕರ್ನಾಟಕ ವಾರ್ತೆ):
ಬಳ್ಳಾರಿ ಮತ್ತು ಹದ್ದಿನಗುಂಡು ರೈಲ್ವೆ ನಿಲ್ದಾಣಗಳ ಮಧ್ಯೆ ಆಫ್ ಲೈನ್ ರೈಲುಹಳಿಯಲ್ಲಿ ಅಂದಾಜು 55-60 ವರ್ಷದ ಅನಾಮಧೇಯ ಮೃತ ವ್ಯಕ್ತಿಯ ದೇಹ ಡಿ.12 ರಂದು ಪತ್ತೆಯಾಗಿದ್ದು, ಈ ಕುರಿತು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರುಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರಿಕ್ಷಕರು ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ 5.6 ಅಡಿ, ಕೋಲು ಮುಖ, ಬಿಳಿಯ ಮೈಬಣ್ಣ, ಸಾಧರಣ ಮೈಕಟ್ಟು ಹೊಂದಿದ್ದು, ಉದ್ದ ಮೂಗು, ತಲೆಯಲ್ಲಿ ಸುಮಾರು 03 ಇಂಚು ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಮತ್ತು ಸುಮಾರು 2 ಇಂಚು ಬಿಳಿಯ ಗಡ್ಡ ಬಿಟ್ಟಿದ್ದು, ಅಗಲವಾದ ಕಿವಿ ಹೊಂದಿರುತ್ತಾನೆ.
ಮೃತನ ಮೈಮೇಲೆ ನೀಲಿ ಬಣ್ಣದ ಬಿಳಿಗೆರೆಯುಳ್ಳ ಆಫ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಒಂದು ಜೊತೆ ನೀಲಿ ಬಣ್ಣದ ಪ್ಲಾಸ್ಟಿಕ್ ಚಪ್ಪಲಿ, ಸೊಂಟಕ್ಕೆ ಬಿಳಿಯ ಬಣ್ಣದ ಉಡದಾರ, ಒಂದು ಕಪ್ಪು ಕೆಂಪು ಮಿಶ್ರಿತ ಮಂಕಿ ಕ್ಯಾಪ್ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೆ ಪೊಲೀಸ್ ವೃತ್ತ ನಿರೀಕ್ಷರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ