ಗುರುವಾರ, ಡಿಸೆಂಬರ್ 12, 2024

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಡಿ.12(ಕರ್ನಾಟಕ ವಾರ್ತೆ): ನಗರದ ಬೆಳಗಲ್ ರಸ್ತೆಯ ಗೌತಮ ನಗರದ ನಿವಾಸಿ ಹಾಗೂ ಹೆಚ್.ಆರ್ ಗವಿಯಪ್ಪ ವೃತ್ತದ ಬಳಿಯ ಜೈನ್ ಮಾರ್ಕೆಟ್‌ನ ಗೇಟ್ ಹತ್ತಿರ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ಎಸ್.ಕೆ ಲೋಕೇಶ್ ಎನ್ನುವ 50 ವರ್ಷದ ವ್ಯಕ್ತಿ ಡಿ.05 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ. *ವ್ಯಕ್ತಿಯ ಚಹರೆ:* ಎತ್ತರ 5.4 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, ಬಿಳಿ ಮಿಶ್ರಿತ ಕಪ್ಪು ತಲೆಕೂದಲು ಹೊಂದಿರುತ್ತಾನೆ. ವ್ಯಕ್ತಿಯು ಕಾಣೆಯದ ಸಂದರ್ಭದಲ್ಲಿ ತಿಳಿ ಹಸಿರು ಬಣ್ಣದ ಲೈನ್ಸ್ ಇರುವ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಕಪ್ಪು ಬಣ್ಣದ ಬೂಟು ಧರಿಸಿದ್ದು, ಕನ್ನಡ, ಹಿಂದಿ, ತೆಲುಗು ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆ ಗುರುತುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ:08392-272022 ಅಥವಾ ಪಿ.ಐ ಮೊ:9480803045, 9480803081 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ