ಶನಿವಾರ, ಡಿಸೆಂಬರ್ 21, 2024
ಲಿಡ್‌ಕರ್‌ನ ಚರ್ಮವಸ್ತುಗಳಿಗೆ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ
ಬಳ್ಳಾರಿ,ಡಿ.21(ಕರ್ನಾಟಕ ವಾರ್ತೆ):
ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷದ ಪ್ರಯುಕ್ತ ಡಿ.20 ರಿಂದ ಜ.05 ರವರೆಗೆ (16 ದಿನಗಳವರೆಗೆ) ಲಿಡ್‌ಕರ್‌ನ ಎಲ್ಲಾ ಚರ್ಮವಸ್ತುಗಳಿಗೆ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಜಿಲ್ಲಾ ಲಿಡ್‌ಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕ ಟಿ.ಸಂಜೀವಪ್ಪ ಅವರು ತಿಳಿಸಿದ್ದಾರೆ.
ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯ ಬುಡಾ ಕಾಂಪ್ಲೆಕ್ಸ್ನ ಶಾಪ್ ನಂ.24 ರ ಲಿಡ್‌ಕರ್ ಲೆದರ್ ಎಂಪೋರಿಯಮ್ ಮಳಿಗೆಗೆ ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ಮತ್ತು ಸಂಜೆ 04 ಗಂಟೆಯಿAದ 08 ಗಂಟೆಯವರೆಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.08392271741 ಮತ್ತು ಮೊ.9844667691 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ