ಮಂಗಳವಾರ, ಡಿಸೆಂಬರ್ 31, 2024

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಲೋಕೆಶ್ ರಾಠೊಡ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ಗೆ ಆಯ್ಕೆ

ಬಳ್ಳಾರಿ,ಡಿ.31(ಕರ್ನಾಟಕ ವಾರ್ತೆ): ಒಡಿಸ್ಸಾದ ಕಳಿಂಗ ವಿಶ್ವವಿದ್ಯಾಲಯ ಭುವನೇಶ್ವರದಲ್ಲಿ ನಡೆಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲೋಕೆಶ್ ರಾಠೊಡ (ಜಿ.ಬಿ.ಆರ್ ಕಾಲೇಜ್, ಹೂವಿನಹಡಗಲಿ) ಡೆಕ್ಯಾಥ್ಲಾನ್ ನಲ್ಲಿ 6258 ಅಂಕಗಳನ್ನು ಪಡೆಯುವುದರ ಮೂಲಕ ಅಖಿಲಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 6 ನೇ ಸ್ಥಾನ ಹೊಂದಿ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2025 ಗೆ ಅರ್ಹತೆ ಪಡೆದಿದ್ದಾನೆ. ಇದು ಅಥ್ಲೆಟಿಕ್ಸ್ನಲ್ಲಿ ಬಳ್ಳಾರಿ ವಿವಿಯ ಶ್ರೇಷ್ಠ ಸಾಧನೆಯಾಗಿದೆ. ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು(ಆಡಳಿತ), ಕುಲಸಚಿವರು (ಮೌಲ್ಯಮಾಪನ), ಹಣಕಾಸು ಅಧಿಕಾರಿಗಳು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಅಥ್ಲೆಟಿಕ್ಸ್ ತಂಡದ ವ್ಯವಸ್ಥಾಪಕರು ಮತ್ತು ತರಬೇತುದಾರರಾದ ಡಾ.ಶಶಿಧರ ಕೆಲ್ಲೂರ ಮತ್ತು ಬಡೇಸಾಬ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ