ಸೋಮವಾರ, ಡಿಸೆಂಬರ್ 16, 2024
ಅನಾಮಧೇಯ ಮೃತದೇಹ ಪತ್ತೆ; ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಡಿ.16(ಕರ್ನಾಟಕ ವಾರ್ತೆ):
ವೀರಾಪುರ-ಹದ್ದಿನಗುಂಡು ರೈಲ್ವೇ ನಿಲ್ದಾಣಗಳ ಮಧ್ಯದ ರೈಲು ಹಳಿಯ ಮೇಲೆ ಅಂದಾಜು 35-40 ವರ್ಷದ ಅನಾಮಧೇಯ ವ್ಯಕ್ತಿಯ ಮೃತದೇಹ ಡಿ.14 ರಂದು ದೊರೆತ್ತಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರು ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ ಸುಮಾರು 5.5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಉದ್ದ ಮೂಗು, ತಲೆಯಲ್ಲಿ ಕಪ್ಪು ಕೂದಲು ಮತ್ತು ಸಣ್ಣ ಗಡ್ಡ, ಮೀಸೆ ಇರುತ್ತದೆ. ಮೃತನ ಮೈಮೇಲೆ ಪಿಂಕ್ ಕಲರ್ ರೆಡಿಮೇಡ್ ಶರ್ಟ್, ನೀಲಿ ಬಣ್ಣದ ಆಫ್ ನೈಟ್‌ಪ್ಯಾಂಟ್ ಇರುತ್ತದೆ.
ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ:9480802131 ಅಥವಾ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರ ಮೊ:9480800471 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ