ಗುರುವಾರ, ಡಿಸೆಂಬರ್ 12, 2024

ಡಿ.16 ರಂದು ಅಂಚೆ ಇಲಾಖೆಯ ನಿವೃತ್ತ ಪಿಂಚಣಿದಾರರಿಗಾಗಿ - ಪಿಂಚಣಿ ಅದಾಲತ್

ಬಳ್ಳಾರಿ,ಡಿ.12(ಕರ್ನಾಟಕ ವಾರ್ತೆ): ಅಂಚೆ ಇಲಾಖೆಯಿಂದ ನಿವೃತ್ತರಾದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಡಿ.16 ರಂದು ಸಂಜೆ 4 ಗಂಟೆಗೆ ಬಳ್ಳಾರಿ ವಿಭಾಗೀಯ ಅಂಚೆ ಕಚೇರಿಯಲ್ಲಿ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ. ಪಿಂಚಣಿದಾರರು ತಮ್ಮ ಕುಂದು-ಕೊರತೆಗಳಿದ್ದರೆ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ, ಬಳ್ಳಾರಿ, ಇವರಿಗೆ ಡಿ.13 ರ ಒಳಗಾಗಿ ತಲುಪುವಂತೆ ಪತ್ರ ಮುಖೇನ ಅಥವಾ doballari.ka@indiapost.gov.in ಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಬಹುದು ಅಥವಾ ತಮ್ಮ ಅಹವಾಲುನೊಂದಿಗೆ ಡಿ.16 ರಂದು ನಡೆಯುವ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಬಹುದು. ಅದಾಲತ್‌ನಲ್ಲಿ ಭಾಗವಹಿಸುವವರಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ