ಸೋಮವಾರ, ಡಿಸೆಂಬರ್ 16, 2024

ಆಹಾರ ಇಲಾಖೆ; ಡಿ.26 ರಂದು ಪಡಿತರ ಬಹಿರಂಗ ಹರಾಜು

ಬಳ್ಳಾರಿ,ಡಿ.16(ಕರ್ನಾಟಕ ವಾರ್ತೆ): ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಂಬ್ಬAದಿಗಳೊAದಿಗೆ ಜಂಟಿಯಾಗಿ ಅನೌಪಚಾರಿಕ ಪಡಿತರ ಪ್ರದೇಶದ 4128.44 ಕ್ವಿಂ. ಅಕ್ಕಿ ಮತ್ತು 63.20. ಕ್ವಿಂ ಗೋಧಿಯನ್ನು ಜಪ್ತಿ ಮಾಡಿ, ಅಗತ್ಯ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಡಿ.26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎಪಿಎಂಸಿ ಗೋದಾಮಿನಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿದೆ ಎಂದು ಅನೌಪಚಾರಿಕ ಪಡಿತರ ಪ್ರದೇಶ, ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಆಸಕ್ತ ಬಿಡ್ಡುದಾರರು ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ ಬಳ್ಳಾರಿ, ಇವರ ಹೆಸರಿನಲ್ಲಿ 2 ಲಕ್ಷ ರೂ.ಗಳ ಡಿಡಿಯನ್ನು ತೆರೆದು, ಡಿ.24ರ ಸಂಜೆ 5.30 ರೊಳಗಾಗಿ ಕಚೇರಿಗೆ ಸಲ್ಲಿಸತ್ತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ನಗರದ ಅನೌಪಚಾರಿಕ ಪಡಿತರ ಪ್ರದೇಶ, ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ