ಶನಿವಾರ, ಡಿಸೆಂಬರ್ 21, 2024

ಡಿ.23 ರಂದು ಕಂಪ್ಲಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಡಿ.21(ಕರ್ನಾಟಕ ವಾರ್ತೆ): ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ 110/11ಕೆವಿ ಕಂಪ್ಲಿ ಉಪಕೇಂದ್ರ ಹಾಗೂ ಇಟ್ಟಿಗಿ 110/11ಕೆವಿ ಉಪಕೇಂದ್ರದ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಡಿ.23 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಕಂಪ್ಲಿ ನಗರ, ನಂ-10 ಮುದ್ದಾಪುರ, ಕಣಿವೆ ತಿಮ್ಮಾಪುರ, ರಾಮಸಾಗರ, ದೇವಸಮುದ್ರ, ಹಂಪಾದೇವನಳ್ಳಿ, ಜಾಯಿಗನೂರು, ಕುಂಬಾರ್ ಕ್ಯಾಂಪ್, ಕೃಷನಗರ ಕ್ಯಾಂಪ್, ಬೆಳಗೋಡುಹಾಳು, ಸಣಾಪುರ, ಇಟ್ಟಿಗಿ, ನಂ-2 ಮುದ್ದಾಪುರ, ಸಣಾಪುರ, ಅರಳಹಳ್ಳಿ, ಬಸವೇಶ್ವರ ಕ್ಯಾಂಪ್, ಮಾರೆಮ್ಮ ಕ್ಯಾಂಪ್ ಮತ್ತು ಎಫ್-7 ಸಣಾಪುರ ಮಾರ್ಗದಲ್ಲಿಯೂ ಸಹ ವಿದ್ಯುತ್ ವ್ಯತ್ಯಯವಾಗಲಿದೆ ಹಾಗೂ ಐಪಿ ಸೆಟ್ ಮಾರ್ಗಗಳಲ್ಲಿ ಬೆಳಿಗ್ಗೆ 4 ಗಂಟೆಯಿAದ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ