ಬುಧವಾರ, ಡಿಸೆಂಬರ್ 18, 2024

ವೃತ್ತ ಮತ್ತು ರಸ್ತೆಗಳ ನಾಮಕರಣ; ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಬಳ್ಳಾರಿ,ಡಿ.18(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್ಗಳ ರಸ್ತೆ ಹಾಗೂ ವೃತ್ತಗಳಿಗೆ ಮರುನಾಮಕರಣ ಮಾಡಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಲ್ಲಿಸಬಹುದು. ಪಾಲಿಕೆ ವ್ಯಾಪ್ತಿಯ 1 ನೇ ವಾರ್ಡ್ನ ತಾಳೂರು ರಸ್ತೆಯ ಡಾ.ಪುನೀತ್ ರಾಜ್‌ಕುಮಾರ್ ರಸ್ತೆಯ ವೃತ್ತವನ್ನು ‘ಶ್ರೀ ಮಹಾಯೋಗಿ ವೇಮನ ವೃತ್ತ’, ವಾರ್ಡ್ ನಂ.25 ರೇಡಿಯೋ ಪಾರ್ಕ್ನ ವೃತ್ತವನ್ನು ‘ಶ್ರೀ ಕೆ.ಭಾಸ್ಕರ್ ನಾಯ್ಡು ವೃತ್ತ’ ಮತ್ತು ನಗರದ ಸರ್ಕಾರಿ ಬಾಲಕೀಯರ ಕಾಲೇಜು ರಸ್ತೆಗೆ ‘ಸಾವಿತ್ರಿ ಬಾಯಿ ಫುಲೆ ರಸ್ತೆ’, ಬಸವೇಶ್ವರ ನಗರದ 2ನೇ ಮುಖ್ಯ ರಸ್ತೆಯ ವೃತ್ತಕ್ಕೆ ‘ಶ್ರೀ ಶ್ರೀ ಶ್ರೀ ಆದಿಜಗದ್ಗುರು ರೇಣುಕಾಚಾರ್ಯ ವೃತ್ತ’ ಎಂದು ನಾಮಕರಣ ಮಾಡುವುದಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ 30 ದಿನದೊಳಗಾಗಿ ಲಿಖಿತ ರೂಪದಲ್ಲಿ ಪಾಲಿಕೆ ಕಚೇರಿಗೆ ಸಲ್ಲಿಸಬಹುದು. ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ