ಮಂಗಳವಾರ, ಡಿಸೆಂಬರ್ 24, 2024

ಕೃಷಿಕ ಸಮಾಜ ಚುನಾವಣೆ: 15 ಪದಾಧಿಕಾರಿಗಳ ಆಯ್ಕೆ

ಬಳ್ಳಾರಿ,ಡಿ.24(ಕರ್ನಾಟಕ ವಾರ್ತೆ): ತಾಲ್ಲೂಕಿನ ಕೃಷಿಕ ಸಮಾಜಜ ಚುನಾವಣೆಗೆ 2025-26 ರಿಂದ 2029-30 ನೇ ಸಾಲಿನವರೆಗೆ ನಡೆಯುವ ಕಾರ್ಯಗಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಳ್ಳಾರಿ ನಗರದ ಪಿ.ಗಾದೆಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪರಮದೇವನಹಳ್ಳಿ ಗ್ರಾಮದ ಜಿ.ಸತ್ಯನಾರಾಯಣರೆಡ್ಡಿ ಉಪಾಧ್ಯಕ್ಷರಾಗಿ, ಕೊರ್ಲ್ಲಗುಂದಿ ಗ್ರಾಮದ ವೈ.ಲಿಂಗರಾಜು ಖಜಾಂಚಿಯಾಗಿ, ಬಳ್ಳಾರಿ ನಗರದ ಎನ್.ಸುರೇಶ್ ನಂದಿ ಜಿಲ್ಲಾ ಪ್ರತಿನಿಧಿಯಾಗಿ ಮತ್ತು ಸಿರಿವಾರ ಗ್ರಾಮದ ಕೆ.ಚಂದ್ರಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಆವಿರೋಧ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ಕೃಷಿಕ ಸಮಾಜಕ್ಕೆ ಒಟ್ಟು 15 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಎಂ.ದಯಾನAದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ