ಶುಕ್ರವಾರ, ಫೆಬ್ರವರಿ 14, 2025

ಫೆ.16 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಫೆ.14(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯ 220/110/11ಕೆ.ವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ ವಿದ್ಯುತ್ ಪರಿವರ್ತಕ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದÀ ಫೆ.16 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 04 ಗಂಟೆಯವರೆಗೆ 11ಕೆ.ವಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ಉಪವಿಭಾಗ-2ರ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-33 ಫೀಡರ್ ಮಾರ್ಗದ ಕೆಹೆಚ್‌ಬಿ ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್‌ಫ್ಯಾಂಟ್ರಿ ರಸ್ತೆ, ವಾಸವಿ ಶಾಲೆ, ಕೊಳಗಲ್ ರಸ್ತೆ, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರೋಡ್, ಭತ್ರಿ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ದಾರ್ಥ ನಗರ, ವಿಯಾನಿ ಶಾಲೆ ಪ್ರದೇಶಗಳು. ಎಫ್-73 ಫೀಡರ್ ಮಾರ್ಗದ ಬಸವನಕುಂಟೆ, ಕೋಟೆ ಪ್ರದೇಶ, 1ನೇ ಗೇಟ್, 2ನೇ ಗೇಟ್, ಸಿದ್ದಾರ್ಥ ನಗರ, ಸುಧಾಕ್ರಾಸ್, ಒ.ಪಿ.ಡಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ನಗರ ಉಪ-ವಿಭಾಗ-2 ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ