ಮಂಗಳವಾರ, ಫೆಬ್ರವರಿ 18, 2025
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಫೆ.18(ಕರ್ನಾಟಕ ವಾರ್ತೆ):
ಸಿರುಗುಪ್ಪ ನಗರದ ಲಾಡಖಾನ್ ಮಸೀದಿ ಹತ್ತಿರ ಸುನಂದಿನಿ ವೈನ್ ಶಾಪ್‌ನ ರಸ್ತೆ ಪಕ್ಕದಲ್ಲಿ ಅಂದಾಜು 65 ರಿಂದ 70 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಮಲಗಿದ್ದ ಸ್ಥಳದಲ್ಲಿಯೇ ಫೆ.10 ರಂದು ಮೃತಪಟ್ಟಿದ್ದು, ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ 5.4 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ಎಡ ಕಣ್ಣಿನ ಕೆಳಗಡೆ ಪುರುಪಿಲ್ಲೆ, ಹಣೆಯ ಮಧ್ಯದಲ್ಲಿ ಸಣ್ಣನೆಯ ಹುಬ್ಬಿದೆ. ಸಾಧಾರಣ ತೆಳ್ಳನೆ ಮೈಕಟ್ಟು ಹೊಂದಿದ್ದು, ಬಿಳಿ ಕೂದಲು, ಬಿಳಿ ಮೀಸೆ ಇರುತ್ತದೆ.
ಮೃತ ದೇಹದ ಮೈಮೇಲೆ ಬಿಳಿ ಬಣ್ಣದ ತುಂಬು ತೋಳಿನ ಜುಬ್ಬಾ, ಬಿಳಿ ಲುಂಗಿ ಧರಿಸಿರುತ್ತಾನೆ. ಹಣೆಯ ಮೇಲೆ ಒಂದು ಹಳೆ ಗಾಯದ ಗುರುತು ಇರುತ್ತದೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೋಲಿಸ್ ಠಾಣೆ ಪಿಎಸ್‌ಐ ದೂ.08396-220333, ಮೊ.9480803053, ಸಿರುಗುಪ್ಪ ಸಿಪಿಐ ದೂ.08396-220003, ಮೊ.9480803032, ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಡಿಎಸ್‌ಪಿ 08392-276000, 9480803021, ಬಳ್ಳಾರಿ ಎಸ್‌ಪಿ ಕಚೇರಿ ದೂ.08932-258400 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ