ಶನಿವಾರ, ಫೆಬ್ರವರಿ 15, 2025
ಕುರೇಕುಪ್ಪ ಪುರಸಭೆ: ದಾಖಲೆ ಸಲ್ಲಿಸಿ
ಬಳ್ಳಾರಿ,ಫೆ.15(ಕರ್ನಾಟಕ ವಾರ್ತೆ):
ಕುರೇಕುಪ್ಪ ಪುರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ಆಸ್ತಿಯ ವಿವರಗಳನ್ನು ಆಸ್ತಿ ಕಣಜ ತಂತ್ರಾAಶದಲ್ಲಿ ಗಣಕೀಕರಣಗೊಳಿಸಿರುವ ಸ್ವತ್ತುಗಳಿಗೆ ಸಂಬAಧಪಟ್ಟ ಅಗತ್ಯ ದಾಖಲೆಗಳನ್ನು ಕುರೇಕುಪ್ಪ ಪುರಸಭೆ ಕಚೇರಿಗೆ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಆಸ್ತಿ ಕಣಜ ತಂತ್ರಾAಶದಲ್ಲಿ ಗಣಕೀಕರಣಗೊಂಡ ಆಸ್ತಿಗಳ ವಿವರಗಳನ್ನು ಪರಿಶೀಲನೆಗೆ ಒಳಪಡಿಸಿ ಇ-ಆಸ್ತಿ ತಂತ್ರಾAಶದಲ್ಲಿ ಇಂಡೀಕರಿಸುವAತೆ ಸೂಚಿಸಿರುವುದರಿಂದ, ಸ್ವತ್ತಿನ ಮಾಲೀಕತ್ವವನ್ನು ದೃಢೀಕರಿಸುವ ಕ್ರಯ/ದಾನ/ವಿಲ್/ಹಕ್ಕು ನಿವೃತ್ತಿ ಹಕ್ಕು ಪತ್ರ/ವಿಭಾಗ ಪತ್ರ ಸ್ವತ್ತಿನ ಪೋಟೊ ಮಾಲೀಕರ ಭಾವಚಿತ್ರ, ಮಾಲೀಕರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಕಂದಾಯ ಪಾವತಿಸಿರುವ ರಶೀದಿ, ವಿದ್ಯುತ್ ಬಿಲ್, ನೀರಿನ ತೆರಿಗೆ ಬಿಲ್ ಇತ್ಯಾದಿ ದಾಖಲಾತಿಗಳನ್ನು ಫೆ.25 ರೊಳಗೆ ಸಲ್ಲಿಸಬೇಕು.
ಈಗಾಗಲೇ ಗಣಕೀಕರಣಗೊಳಿಸಿರುವ ತಮ್ಮ ಆಸ್ತಿಗಳ ವಿವರ ಪರಿಶೀಲಿಸಿಕೊಂಡು, ಯಾವುದೇ ತಿದ್ದುಪಡಿ ಅಥವಾ ಬದಲಾವಣೆ ಇದ್ದಲ್ಲಿ ಅಂತಹ ಮಾಹಿತಿಯನ್ನೂ ಒಂದು ವಾರದೊಳಗಾಗಿ ಕುರೇಕುಪ್ಪ ಪುರಸಭೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕುರೇಕುಪ್ಪ ಪುರಸಭೆ ಕಚೇರಿಯ ನೋಡಲ್ ಅಧಿಕಾರಿ, ಕಂದಾಯ ಅಧಿಕಾರಿ, ಕಂದಾಯ ಶಾಖೆಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ