ಮಂಗಳವಾರ, ಫೆಬ್ರವರಿ 18, 2025

ಫೆ.21 ಮತ್ತು 22 ರಂದು ಕೃತಕ ಕಾಲು ಜೋಡಣಾ ಶಿಬಿರ

ಬಳ್ಳಾರಿ,ಫೆ.18(ಕರ್ನಾಟಕ ವಾರ್ತೆ): ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಮತ್ತು ವಿಶ್ವಭಾರತಿ ಕಲಾನಿಕೇತನ ಶಿಕ್ಷಣ ಸಂಸ್ಥೆ ಹಾಗೂ ಜೈ ಗುರುದೇವ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೃತಕ ಕಾಲು ಜೋಡಣಾ ಶಿಬಿರವನ್ನು ಫೆ.21, 22 ರಂದು ಬೆಳಗ್ಗೆ 09 ಗಂಟೆಗೆ ಬಳ್ಳಾರಿ ವೈದ್ಯಕೀಯ ಆಸ್ಪತ್ರೆ (ಓಪಿಡಿ) ಬಿಮ್ಸ್ ಆವರಣದಲ್ಲಿ ಆಯೋಜಿಸಲಾಗಿದೆ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ಆಧಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಯುಡಿಐಡಿ ಕಾರ್ಡ್, 2 ಭಾವಚಿತ್ರಗಳು. ಹೆಚ್ಚಿನ ಮಾಹಿತಿಗಾಗಿ ಮೊ.8296243251, 9731961326, 8660025089 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ