ಬುಧವಾರ, ಫೆಬ್ರವರಿ 19, 2025

ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಫೆ.19(ಕರ್ನಾಟಕ ವಾರ್ತೆ): ನಗರದ ಬಿಮ್ಸ್ ಆಸ್ಪತ್ರೆಯ ಆವರಣದ ಪೊಲೀಸ್ ಔಟ್ ಪೋಸ್ಟ್ ಮುಂದೆ ಇದ್ದ ಸುಮಾರು 27 ವರ್ಷದ ಅನಾಮಧೇಯ ಮಹಿಳೆ ಅಸ್ವಸ್ಥರಾಗಿ ಮೃತಪಟ್ಟಿದ್ದು, ಮೃತಳ ವಾರಸುದಾರರು ತಿಳಿದಿರುವುದಿಲ್ಲ. ಮೃತಳ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಕೌಲ್ ಬಜಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಚಹರೆ: ಅಂದಾಜು 5.2 ಅಡಿ,ಕೋಲು ಮುಖ, ಕಪ್ಪು ಮೈ ಬಣ್ಣ, ತಲೆಯ ಮೇಲೆ ಕಪ್ಪು ಮತ್ತು ಬಿಳಿ, ಕೂದಲು ಹಾಗೂ ಡಿಜೈನಿನ ನೈಟಿ ಧರಿಸಿರುತ್ತಾಳೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, ಪಿ.ಐ ಮೊ.9480803047, ಪಿಎಸ್‌ಐ ಮೊ.9480803084 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ