ಶುಕ್ರವಾರ, ಫೆಬ್ರವರಿ 28, 2025

ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಫೆ.28(ಕರ್ನಾಟಕ ವಾರ್ತೆ): ನಗರದ ಶ್ರೀರಾಂಪುರ ಕಾಲೋನಿ, 3ನೇ ವಾರ್ಡ್ ಏರಿಯಾದ ನಿವಾಸಿ ಬಾಬು.ಬಿ ಎನ್ನುವ 25 ವರ್ಷದ ವ್ಯಕ್ತಿಯು ಫೆ.27 ರಂದು ಕಾಣೆಯಾಗಿದ್ದು, ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: ಅಂದಾಜು 5.2 ಅಡಿ ಎತ್ತರ, ಕೋಲುಮುಖ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ಕಪ್ಪು ಕೂದಲು ಮತ್ತು ಮುಖದಲ್ಲಿ ಚಿಕ್ಕದಾಗಿ ಮೀಸೆ ಹಾಗೂ ಗಡ್ಡ ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022 ಅಥವಾ ಪಿಐ ಮೊ.9480803045, 9480803081 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ