ಗುರುವಾರ, ಫೆಬ್ರವರಿ 13, 2025

ಕೆಕೆರ್‌ಟಿಸಿ ಬಳ್ಳಾರಿ ವಿಭಾಗ: ಶಿಶಿಕ್ಷÄ ತರಬೇತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಫೆ.13(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಸಿರುಗುಪ್ಪ ಮತ್ತು ಸಂಡೂರು ಘಟಕಗಳಲ್ಲಿ ವಿವಿಧ ತಾಂತ್ರಿಕ ವೃತ್ತಿಗಳಿಗೆ ಶಿಶಿಕ್ಷÄ ತರಬೇತಿ ನೀಡಲು ಅರ್ಹ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು www.apprenticeship.gov.in / www.ncvtmis.com ವೆಬ್‌ಸೈಟ್ ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊAಡು ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ನಗರದ ಸಿರುಗುಪ್ಪ ರಸ್ತೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಗೆ ಮಾ.05 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು. *ಶಿಶಿಕ್ಷÄ ವೃತ್ತಿ ಸಂಖ್ಯೆ* ಆಟೋ ಎಲೆಕ್ಟಿçಷಿಯನ್-02, ಡಿಸೇಲ್ ಮೆಕಾನಿಕ್-16, ಮೋಟರ್ ಮೆಕ್ಯಾನಿಕ್ ವೆಹಿಕಲ್-02. *ಬೇಕಾದ ದಾಖಲೆಗಳು:* ಆಧಾರ್ ಕಾರ್ಡ್, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಟಿಐ ಮೂಲ ಅಂಕಪಟ್ಟಿ, ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ನಕಲು, ಇತ್ತೀಚಿನ ಮೂರು ಭಾವಚಿತ್ರ, ಆನ್‌ಲೈನ್ ನೋಂದಣಿ ವಿವರದ ಪ್ರತಿ ಒದಗಿಸಬೇಕು. *ಸೂಚನೆ:* ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಸಂದರ್ಶನ ಹಾಜರಾಗಲು ಅರ್ಹರಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಗರದ ಸಿರುಗುಪ್ಪ ರಸ್ತೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಗೆ ಭೇಟಿ ನೀಡಬಹುದು ಎಂದು ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ