ಶನಿವಾರ, ಫೆಬ್ರವರಿ 15, 2025

ಫೆ.16 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಫೆ.15(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಜೆಸ್ಕಾಂ ವ್ಯಾಪ್ತಿಯ 220/110/11ಕೆ.ವಿ ಅಲ್ಲೀಪುರ ಸ್ವೀಕರಣ ಕೇಂದ್ರದಲ್ಲಿ 20 ಎಂವಿಎ ಪರಿವರ್ತಕ2 ಕ್ಕೆ ಅಗ್ನಿಶಾಮಕ ರಕ್ಷಣಾ ವ್ಯವಸ್ಥೆ ಅಳವಡಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಫೆ.16 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 04 ಗಂಟೆಯವರೆಗೆ 220/110/11ಕೆ.ವಿ ಅಲ್ಲಿಪುರ ಸ್ವೀಕರಣ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-31 ಕೊಳಗಲ್ಲು ಮಾರ್ಗದ ಕೊಳಗಲ್ಲು, ಕೃಷ್ಣಾ ನಗರ ಕ್ಯಾಂಪ್, ಎಫ್-32 ಐ.ಪಿ ಸೆಟ್ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಅಲ್ಲೀಪುರ, ಆಲದಹಳ್ಳಿ ಕೃಷಿ ಪ್ರದೇಶಗಳು. ಎಫ್-37 ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶ ಮಾರ್ಗದ ಬೆಳಗಲ್ಲು ಗ್ರಾಮ, ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶಗಳು. ಎಫ್-38 ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶ ಫೀಡರ್ ಮಾರ್ಗದ ಬೆಳಗಲ್ಲು ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ ಗ್ರಾಮಗಳು. ಎಫ್-71 ಹರಗಿನದೋಣಿ ಎನ್.ಜೆ.ವೈ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಹೊನ್ನಳ್ಳಿ, ಹೊನ್ನಳ್ಳಿತಾಂಡ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ