ಮಂಗಳವಾರ, ಫೆಬ್ರವರಿ 18, 2025

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಫೆ.18(ಕರ್ನಾಟಕ ವಾರ್ತೆ): ತಾಲ್ಲೂಕಿನ ಅಲ್ಲೀಪುರ ಗ್ರಾಮದ ಮಸೀದಿಗುಡಿ ಎದುರಗಡೆ ನಿವಾಸಿ ವಿ.ವೆಂಕಟೇಶ್ ಎನ್ನುವ 55 ವರ್ಷದ ವ್ಯಕ್ತಿಯು ಜ.17 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಎಂದು ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5.5 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ತೆಳ್ಳನೆಯ ಮೈಕಟ್ಟು, ಬಿಳಿ ಮಿಶ್ರಿತ ಕಪ್ಪು ಕೂದಲು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಆರೆಂಜ್ ಬಣ್ಣದ ಆಫ್ ಶರ್ಟ್ ಮತ್ತು ನಸಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, 9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ