ಮಂಗಳವಾರ, ಫೆಬ್ರವರಿ 11, 2025
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ: ಮಾಹಿತಿ ಸಲ್ಲಿಸಿ
ಬಳ್ಳಾರಿ,ಫೆ.11(ಕರ್ನಾಟಕ ವಾರ್ತೆ):
2024-25 ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫರ್ಮನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಲೆಕ್ಕಪರಿಶೋಧಕರಿಗೆ, ಲೆಕ್ಕಪರಿಶೋಧನಾ ಫರ್ಮಗಳಿಗೆ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ವಾರ್ಷಿಕ ಮಹಾಸಭೆ ಜರುಗಿದ ದಿನದಿಂದ ಏಳು ದಿನಗಳೊಳಗಾಗಿ ಮಾಹಿತಿ ಸಲ್ಲಿಸಬೇಕು ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಜೆ.ಎಸ್.ವಿನಾಯಕ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1236 ಕಾರ್ಯನಿರತ ಸಹಕಾರ ಸಂಘಗಳು ಹಾಗೂ 238 ಕಾರ್ಯನಿರತ ಸೌಹಾರ್ದ ಸಹಕಾರಿಗಳು ಇದ್ದು, ಈವರೆಗೂ 576 ಸಹಕಾರ ಸಂಘಗಳು 150 ಸೌಹಾರ್ದ ಸಹಕಾರಿಗಳು ಮಾತ್ರ ವಾಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಂಡಿರುವ ಕುರಿತು ಮಾಹಿತಿ ಸಲ್ಲಿಸಿದ್ದಾರೆ.
ಇನ್ನುಳಿದ 660 ಸಹಕಾರ ಸಂಘಗಳು ಹಾಗೂ 88 ಸೌಹಾರ್ದ ಸಹಕಾರಿ ಸಂಘಗಳು ಆಯ್ಕೆ ಮಾಹಿತಿ ಸಲ್ಲಿಕೆಗೆ ಬಾಕಿ ಇದ್ದು, ಮುಂದಿನ 07 ದಿನಗಳೊಳಾಗಾಗಿ ವಾರ್ಷಿಕ ಮಹಾಸಭೆಯ ನಡುವಳಿಯ ಜಿರಾಕ್ಸ್ ಪ್ರತಿಯನ್ನು ದೃಢೀಕರಿಸಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ ಕಚೇರಿ, ಎಸ್.ಜಿ.ಕಾಲೇಜು ರಸ್ತೆ, ದುರ್ಗಮ್ಮ ಗುಡಿ ಹತ್ತಿರ, ಬಳ್ಳಾರಿ-583103 ಈ ವಿಳಾಸಕ್ಕೆ ಸಲ್ಲಿಸಬೇಕು.
ಇಲ್ಲವಾದಲ್ಲಿ ತಮ್ಮ ಸಂಘದ ಲೆಕ್ಕಪರಿಶೋಧನೆಗಾಗಿ ಕಾನೂನು ರೀತ್ಯಾ ಲೆಕ್ಕಪರಿಶೋಧಕರ ನೇಮಕಾತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ