ಸೋಮವಾರ, ಜೂನ್ 2, 2025
ಸಂಡೂರು: ಮೀನು ಪಾಶುವಾರು ಹಕ್ಕು ವಿಲೇವಾರಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಜೂ.02(ಕರ್ನಾಟಕ ವಾರ್ತೆ):
ಜಿಲ್ಲೆಯ ಸಂಡೂರು ತಾಲೂಕಿನ ಮೀನುಗಾರಿಕೆ ಇಲಾಖೆಯ ಜಲಸಂಪನ್ಮೂಲಗಳಾದ ವಡ್ಡಿನ ಕಟ್ಟೆ ಕೆರೆ, ಅಂಕಮ್ಮನಾಳ ಕೆರೆ, ಯು.ರಾಜಾಪುರ ಕೆರೆ, ರಾಘವಪುರ ಕೆರೆಗಳ ಮೀನು ಪಾಶುವಾರು ವಿಲೇವಾರಿಗಾಗಿ 2025-26 ನೇ ಸಾಲಿನಿಂದ ಅರ್ಹ ಮೀನುಗಾರರ ಸಹಕಾರ ಸಂಘ, ಮೀನುಗಾರರ ಉತ್ಪಾದಕರ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆರೆಗಳ ಮೀನು ಪಾಶುವಾರು ಹಕ್ಕನ್ನು 5 ವರ್ಷಗಳ ಕಾಲ ನೇರಗುತ್ತಿಗೆ ಮೂಲಕ ವಿಲೇವಾರಿ ಕೈಗೊಳ್ಳಲು ಅವಕಾಶ ಇದ್ದು, ಜೂ.13 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ