ಮಂಗಳವಾರ, ಜೂನ್ 3, 2025

ಅನಾಮಧೇಯ ಮೃತ ಮಹಿಳೆ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜೂ.03(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೆ ನಿಲ್ದಾಣ ವ್ಯಾಪ್ತಿಯ ವ್ಯಾಸನಕೇರಿ ಮತ್ತು ಹೊಸಪೇಟೆ ರೈಲು ನಿಲ್ದಾಣಗಳ ಮಧ್ಯದ ರೈಲ್ವೇ ಕೆ.ಎಂ.ನA. 5/5-6 ನ ಮಧ್ಯೆ ರೈಲು ಹಳಿಯಲ್ಲಿ ಅಂದಾಜು 60 ವರ್ಷ ಅನಾಮಧೇಯ ಮಹಿಳೆ ರೈಲು ಹಳಿ ದಾಟುವಾಗ ಚಲಿಸುವ ರೈಲುಗಾಡಿಗೆ ಸಿಕ್ಕಿ ಜೂ.02 ರಂದು ಮೃತಪಟ್ಟಿದ್ದು, ಮೃತಳÀ ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ಮೃತಳ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೋಲಿಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರು ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಬಿಳಿ ಮತ್ತು ಕಪ್ಪು ಮಿಶ್ರಿತ ಕೂದಲು, ನೆಟ್ಟನೆಯ ಮೂಗು ಅಗಲವಾದ ಹಣೆ ಇರುತ್ತದೆ. ನೆರಳೆ ಬಣ್ಣದ ಕುಪ್ಪಸ, ಗುಲಾಬಿ ಬಣ್ಣ ಸೀರೆ, ಹಸಿರು ಬಣ್ಣದ ಲಂಗ ಮತ್ತು ಕೋರಳಲ್ಲಿ ತಾಳಿ ಇರುತ್ತದೆ. ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತಳ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೆ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ