ಶುಕ್ರವಾರ, ಆಗಸ್ಟ್ 15, 2025
ವಾರ್ತಾ ಇಲಾಖೆಯಲ್ಲಿ 79 ನೇ ಸ್ವಾತಂತ್ರö್ಯ ದಿನಾಚರಣೆ
ಬಳ್ಳಾರಿ,ಆ.15(ಕರ್ನಾಟಕ ವಾರ್ತೆ):
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರö್ಯ ದಿನಾಚರಣೆ ಆಚರಿಸಲಾಯಿತು.
ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಅನೇಕ ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಪ್ರತಿಫಲವಾಗಿ ಇಂದು ನಮಗೆಲ್ಲರಿಗೂ ಸ್ವಾತಂತ್ರö್ಯ ಲಭಿಸಿದೆ. ಅಂತಹ ಮಹನೀಯರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸ್ವಾತಂತ್ರö್ಯ ದಿನಾಚರಣೆಯ ಶುಭಾಷಯ ತಿಳಿಸಿದರು.
ಈ ವೇಳೆ ಕಚೇರಿಯ ಸಿಬ್ಬಂದಿಗಳಾದ ವಿಜಯಕುಮಾರ, ವಿ.ಹನುಮಂತ, ಮಲ್ಲೇಶಪ್ಪ, ಹನುಮೇಶ.ಹೆಚ್., ತೇಜ, ದಿವಾಕರ ಮತ್ತು ಪತ್ರಕರ್ತರಾದ ಮಲ್ಲಿಕಾರ್ಜುನ ಚಿಲ್ಕರಾಗಿ, ಪೀರಸಾಬ್, ಮುರಳಿಕಾಂತ್ ಇದ್ದರು.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ