ಶುಕ್ರವಾರ, ಆಗಸ್ಟ್ 15, 2025

ಜಿಲ್ಲಾ ನ್ಯಾಯಾಲಯದಲ್ಲಿ 79 ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆ | ಸ್ವಾತಂತ್ರö್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನೀಯರನ್ನು ಸ್ಮರಿಸೋಣ: ನ್ಯಾ.ಕೆ.ಜಿ.ಶಾಂತಿ

ಬಳ್ಳಾರಿ,ಆ.15(ಕರ್ನಾಟಕ ವಾರ್ತೆ): ನಮ್ಮ ದೇಶದ ಸ್ವಾತಂತ್ರö್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ಅವರನ್ನು ಸ್ಮರಿಸಿ ಗೌರವ ಸಲ್ಲಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು ಹೇಳಿದರು. ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 79 ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಬಳಿಕ ಅವರು ಮಾತನಾಡಿದರು. ಈ ದಿನ ಸಂಭ್ರಮದ ಹಬ್ಬವನ್ನಾಗಿ ಆಚರಿಸುವುದರ ಹಿಂದೆ ದೇಶದ ಸ್ವಾತಂತ್ರö್ಯಕ್ಕಾಗಿ ಮಡಿದ ಮಹಾತ್ಮ ಗಾಂಧಿ, ಡಾ.ಬಿರ್.ಆರ್.ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಯ್ ಪಾಟೀಲ್, ಜವಾಹರ್‌ಲಾಲ್ ನೆಹರು, ಲಾಲ್ ಬಹುದ್ದೂರ್ ಶಾಸ್ತಿçÃ, ಲಾಲ್ ಲಜಪತ್ ರಾಯ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷಿö್ಮÃಬಾಯಿ, ಸರೋಜಿನಿ ನಾಯ್ಡು, ಮತ್ತು ಹಲವಾರು ಮಹಿನೀಯರ ಶ್ರಮವಿದೆ ಎಂದು ತಿಳಿಸಿದರು. ಇಂದು ದೇಶಕ್ಕಾಗಿ ಹೋರಾಡಿದ ಎಲ್ಲಾ ಹಿರಿಯರನ್ನು ಸ್ಮರಿಸಿ, ಅವರ ತ್ಯಾಗ, ಬಲಿದಾನ, ಸಾಧನೆಯ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ವಿವಿಧತೆಯಲ್ಲಿ ಏಕತೆ ಕಂಡು ಎಲ್ಲರೂ ದೇಶದ ಸರ್ವೊತೋಮುಖ ಬೆಳವಣಿಗೆಗೆ ಚಿಂತನೆ ಮಾಡಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ನಾನು ನನ್ನದು ಎನ್ನುವ ನಮ್ಮೊಳಗಿನ ಸ್ವಯಂ ವ್ಯಕ್ತಿತ್ವವನ್ನು ಹಿಮ್ಮೆಟ್ಟಿಸಿ, ಸುಭದ್ರ ದೇಶ ಕಟ್ಟುವಲ್ಲಿ ದಿಟ್ಟ ನಿರ್ಧಾದೊಂದಿಗೆ ಪ್ರತಿಯೋಬ್ಬರು ಆರ್ಥಿಕವಾಗಿ, ತಾಂತ್ರಿಕವಾಗಿ ಹಾಗೂ ಯುವಜನತೆಯು ಮಾದಕ ವಸ್ತು, ದುಶ್ಚಟಗಳಿಂದ ದೂರವಿದ್ದು ದೇಶದ ಏಳಿಗೆ ಮತ್ತು ಭದ್ರತೆಗಾಗಿ ಪಣ ತೊಡಬೇಕು ಎಂದು ತಿಳಿಸಿದರು. ಸ್ವಾತಂತ್ರೊö್ಯÃತ್ಸವ ದಿನಾಚರಣೆಯನ್ನು ಸಾಂಕೇತಿಕವಾಗಿ ಈ ದಿನ ಮಾತ್ರ ಹಿರಿಯರಿಗೆ ಗೌರವ ಸೂಚಿಸುವುದರೊಂದಿಗೆ ಸೀಮಿತಗೊಳಿಸದೆ, ದಿನ ನಿತ್ಯ ದೇಶದ ಅಭಿವೃದ್ಧಿಗಾಗಿ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಭಾರತ ದೇಶವು ಆರ್ಥಿಕತೆ, ವೈದ್ಯಕೀಯ, ವೈಜ್ಞಾನಿಕ, ಶಿಕ್ಷಣ, ಕ್ರೀಡೆ, ಉದ್ಯಮ, ತಾಂತ್ರಿಕತೆ, ಕೃಷಿ, ಬಲಿಷ್ಠ ಸೇನಾ ಪಡೆ, ಸೇವಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ದೇಶದ ರಕ್ಷಣೆ, ಭದ್ರತೆ ಮತ್ತು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ, ಕಾನೂನು, ರಾಜಕಾರಣಿ, ಅಧಿಕಾರಿಗಳಿಂದ ಮಾತ್ರವಲ್ಲದೆ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಸಹ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಾಗಿ ದೇಶದ ಹಿತ ರಕ್ಷಣೆ ಕಾಪಾಡಬೇಕು ಎಂದು ತಿಳಿಸಿದರು. ನಮ್ಮ ದೇಶವು ಸದೃಢ ರಾಷ್ಟçವಾಗಿದ್ದು, ನೆರೆ ಹೊರೆ ದೇಶದ ದಾಳಿಯಿಂದ ಹೋರಾಡಲು ಬಲಿಷ್ಠವಾದ ಭಾರತೀಯ ಸೇನೆ ಪಡೆ, ವಾಯು ಸೇನೆ ಪಡೆ, ನೌಕಾ ಪಡೆಯನ್ನು ಹೊಂದಿದೆ. ನಾವೆಲ್ಲರೂ ಸುರಕ್ಷಿತವಾಗಿರಲು ಇವರ ಶ್ರಮ ಅಪರವಾಗಿದ್ದು, ಇತ್ತಿಚೇಗೆ ನಡೆದ ಪಹಲ್ಗಾಂ ದಾಳಿಯ ಪ್ರತೀಕಾರವನ್ನು ಅತಿ ವೇಗದಲ್ಲಿ ಆಪರೇಷನ್ ಸಿಂಧೂರ ಎಂಬ ಆಪರೇಷನ್ ಮೂಲಕ ದಾಳಿ ನಡೆಸಿದ ಭಾರತೀಯ ಸೇನೆಯಿಂದ ನಮ್ಮ ದೇಶಕ್ಕೆ ಹೆಮ್ಮಯ ವಿಷಯವಾಗಿದೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಜೇಶ್ ಎನ್.ಹೊಸಮನೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮ ಸೇರಿದಂತೆ ನ್ಯಾಯಾಲಯದ ನ್ಯಾಯಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾವಾದಿಗಳು, ಸಿಬ್ಬಂದಿ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ