ಶುಕ್ರವಾರ, ನವೆಂಬರ್ 14, 2025

ನ.18 ರಂದು ಕೃಷಿ ಉಪಕರಣಗಳ ಬಹಿರಂಗ ಹರಾಜು

ಬಳ್ಳಾರಿ,ನ.14(ಕರ್ನಾಟಕ ವಾರ್ತೆ): ಜಿಲ್ಲೆಯ ಹಗರಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಅನುಪಯುಕ್ತ ವಸ್ತುಗಳಾದ ಕೃಷಿ ಉಪಕರಣಗಳನ್ನು ನ.18 ರಂದು ಬೆಳಿಗ್ಗೆ 10 ಗಂಟೆಗೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಅವರು ತಿಳಿಸಿದ್ದಾರೆ. ಆಸಕ್ತಿವುಳ್ಳವರು ಅನುಪಯುಕ್ತ ವಸ್ತುಗಳ ಬಗ್ಗೆ ಕಚೆೆÃರಿಯ ಕಾರ್ಯನಿರ್ವಹಿಸುವ ಯಾವುದೇ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ) ಬೆÉಳಿಗ್ಗೆ 09 ಗಂಟೆಯಿAದ ಸಂಜೆ 05 ಗಂಟೆಯೊಳಗೆ ಖುದ್ದಾಗಿ ಬಂದು ಪರಿಶೀಲಿಸಿಕೊಳ್ಳಬಹುದು. *ಷರತ್ತು:* ಅನುಪಯುಕ್ತ ವಸ್ತುಗಳನ್ನು ಹರಾಜಿನ ಕೊನೆಯ ಸಮಯದವರೆಗೂ ಕಚೇರಿ ವೇಳೆಯಲ್ಲಿ ಪರಿಶೀಲಿಸಿಕೊಳ್ಳಬಹುದು. ಅನುಪಯುಕ್ತ ವಸ್ತುಗಳನ್ನು ನೋಡಲು ಸಾಕಷ್ಟು ಕಾಲಾವಧಿ ನೋಡಿರುವುದರಿಂದ ಹರಾಜಿನ ಬಗ್ಗೆ ಹರಾಜು ಮುಗಿದ ಬಳಿಕ ಬರುವ ಯಾವುದೇ ಆಕ್ಷೇಪಣೆಗಳನ್ನು ಅಂಗೀಕರಿಸುವುದಿಲ್ಲ. ಹರಾಜಿನಲ್ಲಿ ಭಾಗವಹಿಸುವವರು ಹರಾಜಿಗೆ ಮುಂಚೆ ಅನುಪಯುಕ್ತ ವಸ್ತುಗಳಿಗೆ ಠೇವಣಿ ಹಣ 10 ಸಾವಿರ ರೂಗಳು ಪ್ರತ್ಯೇಕವಾಗಿ ಕಚೇರಿಗೆ ಸಂದಾಯ ಮಾಡಿ ಹರಾಜಿನಲ್ಲಿ ಭಾಗವಹಿಸಬೇಕು. ಹರಾಜು ಮುಗಿದ ಬಳಿಕ ಹÀಣವನ್ನು ಹಿಂತಿರುಗಿಸಲಾಗುವುದು. ಹೆಚ್ಚಿನ ಬಿಡ್ ಮಾಡಿದ ಸವಾಲುದಾರರು ಸವಾಲು ನಿಂತಲ್ಲಿ ಕೂಡಲೇ ಪೂರ್ಣ ಹಣವನ್ನು ಸಂದಾಯ ಮಾಡಿ ಅಧೀಕೃತ ಸ್ವೀಕೃತಿ ಪತ್ರ ಪಡೆಯ ತಕ್ಕದ್ದು, ಇಲ್ಲದಿದ್ದಲ್ಲಿ ಅವರು ಕಟ್ಟಿರುವ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ. ಹಣವನ್ನು ಹಣಕಾಸು ನಿಯಂತ್ರಾಧಿಕಾರಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇವರಿಗೆ ಸಂದಾಯ ಮಾಡಲಾಗುವುದು. ಹರಾಜಿನಲ್ಲಿ ಅನುಪಯುಕ್ತ ವಸ್ತುಗಳು ಒಂದು ವೇಳೆ ಸರಿಯಾದ ಬೆಲೆಗೆ ಹೋಗದಿದ್ದಲ್ಲಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹರಾಜನ್ನು ರದ್ದುಪಡಿಸುವ ಹಕ್ಕನ್ನು ಹೊಂದಿರುತ್ತದೆ. ಯಶಸ್ವಿ ಬಿಡ್‌ದಾರನು ಪೂರ್ಣ ಹಣ ಸಂದಾಯ ಮಾಡಿ ಸ್ವೀಕೃತ ಪತ್ರ ಪಡೆದ ಸಮಯದಿಂದಲೇ ಅನುಪಯುಕ್ತ ವಸ್ತುಗಳ ಮೇಲೆ ಹಕ್ಕುವುಳ್ಳವನಾಗಿ ಅದರ ರಕ್ಷಣೆ, ನಿರ್ವಹಣೆ, ಸಾಗಾಣಿಕೆ ಇತ್ಯಾದಿ ಎಲ್ಲಾ ಸ್ವಯಂ ಆಗಿ ನೋಡಿಕೊಳ್ಳತಕ್ಕದ್ದು. ಹರಾಜು ಪ್ರಾರಂಭವಾದ ನಂತರ ಬಂದವರಿಗೆ ಹರಾಜಿನಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. ಮೇಲೆ ತಿಳಿಸಿದ ಅನುಪಯುಕ್ತ ವಸ್ತುಗಳನ್ನು ನ.18 ರೊಳಗೆ ಪಡೆಯತಕ್ಕದ್ದು, ನಂತರ ಅವಕಾಶವಿರುವುದಿಲ್ಲ. ಯಶಸ್ವಿ ಬಿಡ್‌ದಾರನ ಠೇವಣಿ ಹಣವನ್ನು ನ.18 ರಂದು ಹಿಂತಿರುಗಿಸಲಾಗುವುದು. ಯಶಸ್ವಿ ಬಿಡ್‌ದಾರರು ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಹೊರತುಪಡಿಸಿ ಕೇಂದ್ರ‍್ರದ ಬೇರೆ ವಸ್ತುಗಳಿಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಬಾರದು. ಯಾವುದೇ ತರಹದ ಹಾನಿಯಾದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಯಮಾವಳಿ ಮತ್ತು ನಿರ್ಣಯದ ಪ್ರಕಾರ ಹಾನಿಯ ಖರ್ಚನ್ನು ತಕ್ಷಣ ಭರಿಸಬೇಕು. ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಕೇವಲ ಕಚೆÉÃರಿ ಸಮಯದಲ್ಲಿ ಅಂದರೆ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಮಾತ್ರ ಕೇಂದ್ರದ ಹೊರಗೆ ಸಾಗಿಸಬೇಕು. ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಕೇಂದ್ರದ ಹೊರಗೆ ಸಾಗಿಸಲು ಅವಶ್ಯಕವಾದ ಪರವಾನಿಗೆ ಪತ್ರಗಳನ್ನು ಸಂಭAದಪಟ್ಟ ಅಧಿಕಾರಿಗಳಿಂದ/ಸAಸ್ಥೆಗಳಿAದ ಬಿಡ್‌ದಾರರೇ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ