ಶುಕ್ರವಾರ, ನವೆಂಬರ್ 14, 2025
ಕುರೇಕುಪ್ಪ ಪುರಸಭೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ನ.14(ಕರ್ನಾಟಕ ವಾರ್ತೆ):
ಕುರೇಕುಪ್ಪ ಪುರಸಭೆ ವತಿಯಿಂದ 2019-20/21ನೇ ಸಾಲಿನ ಎಸ್‌ಸಿಎಸ್‌ಪಿ ಯೋಜನೆಯಡಿ ಬಾಕಿ ಉಳಿದ ಮೊತ್ತಕ್ಕೆ ಅರ್ಹ ಫಲಾನುಭವಿಗಳಿಂದ ಪಕ್ಕ ಮನೆ ನಿರ್ಮಾಣಕ್ಕಾಗಿ, ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ ಪಡೆಯಲು ಮತ್ತು ಪುರಸಭೆಯ ಪೌರಕಾರ್ಮಿಕರಿಗೆ ನಿವೇಶನ ಖರೀದಿಗಾಗಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೇಕಾದ ದಾಖಲೆ:
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತಿಚೀನ ಭಾವಚಿತ್ರÀ, ಮನೆ ತೆರಿಗೆ ರಶೀದಿ, ನಮೂನೆ-03, ನಿವೇಶನ ಖರೀದಿ ಸಂಬAಧಿಸಿದAತೆ ಅಗ್ರಿಮೆಂಟ್ ಪತ್ರ ಹಾಗೂ ಇತರೆ ದಾಖಲೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನ.20 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಕುರೇಕುಪ್ಪ ಪುರಸಭೆ ಕಚೇರಿ ಅಥವಾ ದೂ. 08395-295601 ಗೆ ಸಂಪರ್ಕಿಸಬಹುದು ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ