ಮಂಗಳವಾರ, ಫೆಬ್ರವರಿ 10, 2026
ಫೆ.12 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಫೆ.10(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 220/110/11 ಕೆ.ವಿ ಅಲ್ಲೀಪುರ ಸ್ವೀಕರಣಾ ಕೇಂದ್ರದಲ್ಲಿ ಶಿಥೀಲಗೊಂಡ ಜಿ.ಒ.ಎಸ್ ಬದಲಾಯಿಸುವ ಕಾರ್ಯ ತುರ್ತಾಗಿ ಕೈಗೊಂಡಿರುವುದರಿAದ ಫೆ.12 ರಂದು ಬೆಳಗ್ಗೆ 09 ಸಂಜೆ 06 ಗಂಟೆಯ ರವರೆಗೆ ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:*
ಎಫ್-31 ಅಲ್ಲೀಪುರ ನಗರ ಪ್ರದೇಶ ಫೀಡರ್ ಮಾರ್ಗದ ಅಲ್ಲಿಪುರ, ರಾಮೇಶ್ವರಿ ನಗರ, ಬೈಪಾಸ್ ರಸ್ತೆ. ಎಫ್-32 ಐ.ಪಿ ಸೆಟ್ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಅಲ್ಲೀಪುರ ಕೃಷಿ ಪ್ರದೇಶಗಳು.
ಎಫ್-37 ಮತ್ತು 38 ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಕೈಗಾರಿಕೆ ಪ್ರದೇಶ. ಎಫ್-71 ಹರಗಿನದೋಣಿ ಎನ್.ಜೆ.ವೈ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಹೊನ್ನಾಳ್ಳಿ, ಹೊನ್ನಳ್ಳಿ ತಾಂಡ ಮುಂತಾದ ಗ್ರಾಮಗಳು.
ಎಫ್-74 ಗೌತಮ್ ನಗರ ಎನ್.ಜೆ.ವೈ ಫೀಡರ್ ಮಾರ್ಗದ ಡಿಸಿ ನಗರ, ಪ್ರ‍್ರಶಾಂತ ನಗರ, ಆಲದಹಳ್ಳಿ, ಗೌತಮ್ ನಗರ, ಹೌಸಿಂಗ್ ಬೋರ್ಡ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ