ಮಂಗಳವಾರ, ಫೆಬ್ರವರಿ 3, 2026
‘ರಾಷ್ಟçಕ್ಕಾಗಿ ಮಧ್ಯಸ್ಥಿಕೆ 2.0' 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ
ಬಳ್ಳಾರಿ,ಫೆ.03(ಕರ್ನಾಟಕ ವಾರ್ತೆ):
ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ರಾಜಿ ಯೋಜನೆ ಸಮಿತಿ ನಿರ್ದೇಶನದಂತೆ, ಜಿಲ್ಲಾ ನ್ಯಾಯಾಲಯದಲ್ಲಿ ‘ರಾಷ್ಟçಕ್ಕಾಗಿ ಮಧ್ಯಸ್ಥಿಕೆ 2.0’ ಎಂಬ 90 ದಿನಗಳ ಬೃಹತ್ ಮಧ್ಯಸ್ಥಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ತಿಳಿಸಿದ್ದಾರೆ.
ಈ ಅಭಿಯಾನವು ಜನವರಿ-2, 2026 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ ತಿಂಗಳವರೆಗೆ ನಡೆಯಲಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ, ಶೀಘ್ರವಾಗಿ ಮತ್ತು ಖರ್ಚಿಲ್ಲದೆ ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಇದು ಸುವರ್ಣಾವಕಾಶವಾಗಿದೆ ಎಂದು ತಿಳಿಸಿದ್ದಾರೆ.
*ಮಧ್ಯಸ್ಥಿಕೆಯ ಉಪಯೋಗಗಳು:*
ಮಧ್ಯಸ್ಥಿಕೆ ಎಂಬುದು ಎರಡು ಅಥವಾ ಹೆಚ್ಚು ಕಕ್ಷಿದಾರರ ನಡುವಿನ ವಿವಾದಗಳನ್ನು ಬಗೆಹರಿಸಲು ಬಳಸುವ ಒಂದು ಪರ್ಯಾಯ ವಿವಾದ ಇತ್ಯರ್ಥ ವಿಧಾನವಾಗಿದೆ. ಈ ಪ್ರಕ್ರಿಯೆಯಲ್ಲಿ ಒಬ್ಬ ತಟಸ್ಥ ಮೂರನೇ ವ್ಯಕ್ತಿ, ಅಂದರೆ ‘ಮಧ್ಯಸ್ಥಗಾರ', ವಿವಾದದಲ್ಲಿರುವ ಕಕ್ಷಿದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಮಧ್ಯಸ್ಥಗಾರರು ಯಾವುದೇ ನಿರ್ಧಾರವನ್ನು ಹೇರುವುದಿಲ್ಲ, ಬದಲಾಗಿ, ಅವರು ಸಂವಹನ ಮತ್ತು ಮಾತುಕತೆಯ ಮೂಲಕ ಪರಸ್ಪರ ಒಪ್ಪಿಗೆಯ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ.
*ಮಧ್ಯಸ್ಥಿಕೆಯ ಪ್ರಮುಖ ಅಂಶ:*
ಸಮಯ ಮತ್ತು ಹಣ ಉಳಿತಾಯ: ನ್ಯಾಯಾಲಯದ ಮೊಕದ್ದಮೆಗಳಿಗೆ ಹೋಲಿಸಿದರೆ, ಮಧ್ಯಸ್ಥಿಕೆಯ ಪ್ರಕ್ರಿಯೆಯು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಡಿಮೆ ವೆಚ್ಚದಲ್ಲಿರುತ್ತದೆ. ಇದರಿಂದ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ.
ಸೌಹಾರ್ದಯುತ ಇತ್ಯರ್ಥ: ನ್ಯಾಯಾಲಯದ ಹೋರಾಟದಲ್ಲಿ ಸಾಮಾನ್ಯವಾಗಿ ಒಂದು ಪಕ್ಷ ಗೆಲ್ಲುತ್ತದೆ ಮತ್ತು ಇನ್ನೊಂದು ಪಕ್ಷ ಸೋಲುತ್ತದೆ, ಇದು ದ್ವೇಷ ಮತ್ತು ಅಸೂಯೆಗೆ ಕಾರಣವಾಗಬಹುದು. ಆದರೆ ಮಧ್ಯಸ್ಥಿಕೆಯಲ್ಲಿ, ಎರಡೂ ಪಕ್ಷಗಳ ಒಪ್ಪಿಗೆಯ ಮೂಲಕ ಪರಿಹಾರ ಕಂಡುಕೊಳ್ಳುವುದರಿAದ ಸೌಹಾರ್ದಯುತ ಸಂಬAಧಗಳು ಉಳಿಯುತ್ತವಲ್ಲದೇ ಎರಡೂ ಪಕ್ಷಗಾರರು ಗೆಲುವಿನ ನಗೆ ಬೀರುತ್ತಾರೆ.
ಗೌಪ್ಯತೆ: ಮಧ್ಯಸ್ಥಿಕೆ ಪ್ರಕ್ರಿಯೆಯು ಗೌಪ್ಯವಾಗಿರುತ್ತದೆ. ನ್ಯಾಯಾಲಯದಲ್ಲಿರುವಂತೆ ಸಾರ್ವಜನಿಕವಾಗಿ ವಿಚಾರಣೆ ನಡೆಯುವುದಿಲ್ಲ. ಇದರಿಂದ ಪಕ್ಷಗಳ ವೈಯಕ್ತಿಕ ಮತ್ತು ಸೂಕ್ಷö್ಮ ವಿಷಯಗಳು ಗೌಪ್ಯವಾಗಿ ಉಳಿಯುತ್ತವೆ.
ಕಕ್ಷಿದಾರರ ನಿಯಂತ್ರಣ: ಮಧ್ಯಸ್ಥಿಕೆಯಲ್ಲಿ, ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ನಿರ್ಧಾರವನ್ನು ಸ್ವತಃ ಕಕ್ಷಿದಾರರೇ ತೆಗೆದುಕೊಳ್ಳುತ್ತಾರೆ. ಇದರಿಂದ, ಕಕ್ಷಿದಾರರು ತಮಗೆ ಸೂಕ್ತವೆನಿಸಿದ ಒಪ್ಪಂದಕ್ಕೆ ಬರಬಹುದು.
ವ್ಯಾಪಕ ಬಳಕೆ (ವಿವಿಧ ರೀತಿಯ ಪ್ರಕರಣಗಳಿಗೆ ಸೂಕ್ತವಾಗಿದೆ): ಮಧ್ಯಸ್ಥಿಕೆಯು ಅನೇಕ ವಿಧದ ಪ್ರಕರಣಗಳಿಗೆ ಸೂಕ್ತವಾಗಿದೆ. ಅದರಲ್ಲಿ ಕುಟುಂಬ ವಿವಾದಗಳು, ಆಸ್ತಿ ವಿವಾದಗಳು, ವಾಣಿಜ್ಯ ವಿವಾದಗಳು, ಸೇವೆ ಸಂಬAಧಿತ ಪ್ರಕರಣಗಳು, ವಾಹನ ಅಪಘಾತ ವಿಮೆ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು ಸೇರಿದಂತೆ ಅನೇಕ ಬಗೆಯ ಪ್ರಕರಣಗಳು ಒಳಗೊಂಡಿರುತ್ತವೆ.
ಕಳೆದ 2025 ರ ಜುಲೈ 1 ರಿಂದ ಅಕ್ಟೋಬರ್ ರವರೆಗೆ ನಡೆದ ಮೊದಲ ಹಂತದ ಅಭಿಯಾನವು ಬಳ್ಳಾರಿ ಜಿಲ್ಲೆಯಲ್ಲಿ ಯಶಸ್ಸು ಕಂಡಿದೆ.
ಅದರಲ್ಲಿ ಮಧ್ಯಸ್ಥಿಕೆಗೆ ಶಿಫಾರಸುಗೊಂಡ ಪ್ರಕರಣಗಳು-1,468, ಮಧ್ಯಸ್ಥಿಕೆ ನಡೆದ ಪ್ರಕರಣಗಳು-851, ಯಶಸ್ವಿಯಾಗಿ ಇತ್ಯರ್ಥಗೊಂಡ ಪ್ರಕರಣಗಳು- 117, ವೈವಾಹಿಕ/ಕೌಟುಂಬಿಕ ವ್ಯಾಜ್ಯಗಳ ಇತ್ಯರ್ಥ-41, ಚೆಕ್ ಅಮಾನ್ಯ ಪ್ರಕರಣಗಳು-32, ಆಸ್ತಿ ವಿಭಜನೆ-23, ಇತರೆ ಪ್ರಕರಣಗಳು-21 ಇತ್ಯರ್ಥಗೊಂಡಿವೆ. ಒಟ್ಟು 68 ನುರಿತ ಸಂಧಾನಕಾರರು ಭಾಗವಹಿಸಿದ್ದರು.
ಪ್ರಕರಣದ ಉಭಯ ಪಕ್ಷಗಾರರು ಒಪ್ಪಿದಲ್ಲಿ, ಸಂಬAಧಪಟ್ಟ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ತಮ್ಮ ಪ್ರಕರಣವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿಕೊಳ್ಳಬಹುದು. ಇಲ್ಲಿ ಅನುಭವಿ ಸಂಧಾನಕಾರರು ಗೌಪ್ಯವಾಗಿ ಮತ್ತು ಸೌಹಾರ್ದಯುತವಾಗಿ ವ್ಯಾಜ್ಯವನ್ನು ಬಗೆಹರಿಸಿಕೊಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಕಾನೂನು ನೆರವಿಗಾಗಿ ರಾಷ್ಟಿçÃಯ ಸಹಾಯವಾಣಿ ಸಂಖ್ಯೆ 15100 ಕ್ಕೆ ಕರೆ ಮಾಡಬಹುದು ಅಥವಾ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ