ಶುಕ್ರವಾರ, ಡಿಸೆಂಬರ್ 8, 2023

ಕಂಪ್ಲಿ ಪುರಸಭೆ: ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ,ಡಿ.08(ಕರ್ನಾಟಕ ವಾರ್ತೆ): ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ 2023-24ನೇ ಸಾಲಿನ ಎಸ್.ಎಫ್.ಸಿ ಶೇ.7.25 (ಇತರೆ ಹಿಂದುಳಿದವರ ಕಲ್ಯಾಣಕ್ಕಾಗಿ) ಹಾಗೂ ಶೇ.5 ವಿಕಲಚೇತನರ ವೈಯಕ್ತಿಕ ಸೌಲಭ್ಯ ಯೋಜನೆಯಡಿ ವಿವಿಧ ಸೌಲಭ್ಯಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೌಲಭ್ಯಗಳು: ಹಿಂದುಳಿದ ವರ್ಗದ ಎಂ.ಬಿ.ಬಿ.ಎಸ್ ಮತ್ತು ಬಿ.ಇ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಸಲು ಸಹಾಯಧನ, ಬುದ್ದಿಮಾಂದ್ಯ ಮಕ್ಕಳಿಗೆ ವಾಟರ್ ಬೆಡ್ ಹಾಗೂ ವೀಲ್‍ಚೇರ್ ಖರೀದಿಸಲು ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.18 ಕೊನೆಯ ದಿನವಾಗಿದೆ. ದಾಖಲೆಗಳು: ನಿಗದಿತ ಅರ್ಜಿ ನಮೂನೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಐ.ಡಿ ಕಾರ್ಡ್, ಪ್ರಸಕ್ತ ಸಾಲಿನ ವಿದ್ಯಾಭ್ಯಾಸದ ಪ್ರಮಾಣ ಪತ್ರ, ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆಯದೇ ಇರುವ ಬಗ್ಗೆ ಪ್ರಮಾಣ ಪತ್ರ, ಮೂರು ಪೆÇೀಟೋ ಹಾಗೂ ಬಿ.ಇ, ಎಂ.ಬಿ.ಬಿ.ಎಸ್.ನ ಪ್ರಥಮ ವರ್ಷದ ಅಂಕಪಟ್ಟಿ, ಯು.ಡಿ.ಐ ಕಾರ್ಡ್, ಅಂಗವಿಕಲರ ವೈದ್ಯಕೀಯ ಪತ್ರ (ಶೇ.70ರಷ್ಟು ಇದ್ದವರು ಮಾತ್ರ ಅರ್ಹರು) ಹಾಗೂ ಇತರೆ ದಾಖಲೆಗಳು. ಹೆಚ್ಚಿನ ಮಾಹಿತಿಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಭೇಟಿ ನೀಡಬಹುದು ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ