ಸೋಮವಾರ, ಡಿಸೆಂಬರ್ 4, 2023

ಯುವಕ ಕಾಣೆ

ಬಳ್ಳಾರಿ,ಡಿ.04(ಕರ್ನಾಟಕ ವಾರ್ತೆ): ನಗರದ ಬೊಮ್ಮನಾಳ್ ರಸ್ತೆಯ ಕಣೇಕಲ್ ಬಸ್ ಸ್ಟಾಂಡ್ ಹತ್ತಿರ ರಾಣಿ ತೋಟ ಕ್ರಾಸ್ ಬಳಿ ನಿವಾಸಿ ಚೇತನ್ ಕುಮಾರ್ ಎನ್ನುವ 23 ವರ್ಷದ ಯುವಕ ನ.23ರಂದು ಕಾಣೆಯಾಗಿರುವ ಕುರಿತು ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೆÇಲೀಸ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5.6 ಅಡಿ, ಎಣ್ಣೆ ಗೆಂಪು ಮೈಬಣ್ಣ, ಕೋಲು ಮುಖ, ಕಪ್ಪು ತಲೆ ಕೂದಲು ಹೊಂದಿದ್ದು, ನೀಲಿ ಬಣ್ಣದ ಪಟ್ಟ ಪಟ್ಟಿ ಅಂಗಿ ಮತ್ತು ನೀಲಿ ಕಲರ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮೇಲ್ಕಂಡ ಚಹರೆಯುಳ್ಳ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯ ದೂ.08392-272022, ಪಿ.ಎಸ್.ಐ ಮೊ.9480803081 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ