ಶುಕ್ರವಾರ, ಡಿಸೆಂಬರ್ 1, 2023
ಅಪರಿಚಿತ ಮೃತ ವ್ಯಕ್ತಿ; ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಡಿ.01(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೇ ನಿಲ್ದಾಣದ ವ್ಯಾಪ್ತಿಯ ಬರುವ ಹದ್ದಿನ ಗುಂಡು ಮತ್ತು ಹಗರಿ ರೈಲು ನಿಲ್ದಾಣದ ಮಧ್ಯದಲ್ಲಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯು ನ.30ರಂದು ಮೃತಪಟ್ಟಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಚಹರೆ ಗುರುತು: ಎತ್ತರ ಸುಮಾರು 5.5 ಅಡಿ, ಸಾಧಾರಣ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಸಣ್ಣ ಕಿವಿ, ದಪ್ಪ ಮೂಗು, ತಲೆಯಲ್ಲಿ ಸುಮಾರು 1 ರಿಂದ 2 ಇಂಚು ಉದ್ದದ ಕಪ್ಪು ಕೂದಲು ಹಾಗೂ ಸಣ್ಣ ಗಡ್ಡ, ಮೀಸೆ ಬಿಟ್ಟಿರುತ್ತಾನೆ.
ಮೃತನ ಮೈ ಮೇಲಿನ ಬಟ್ಟೆಗಳು: ಕೆಂಪು ಬಣ್ಣದ ತುಂಬು ತೋಳಿನ ಟಿ ಶರ್ಟ್, ಕಪ್ಪು ಮತ್ತು ನೀಲಿ ಬಣ್ಣದ ಆಫ್ ಚಡ್ಡಿ, ಎಡಗೈ ಮುಂಗೈಯಲ್ಲಿ ಕಪ್ಪು ಬಣ್ಣದ ರಬ್ಬರ್ ಬ್ಯಾಂಡ್ ಧರಿಸಿರುತ್ತಾನೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೆÇಲೀಸ್ ಠಾಣೆಯ ಪೆÇಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ರೈಲ್ವೇ ಪೆÇಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ