ಮಂಗಳವಾರ, ಜುಲೈ 23, 2024

ಜು.24 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜು.23(ಕರ್ನಾಟಕ ವಾರ್ತೆ): ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11 ಕೆವಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬ್ಯಾಂಕ್-2 ಫೀಡರ್‍ನ ತುರ್ತು ನಿರ್ವಾಹಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜು.24 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಬಂಡಿಹಟ್ಟಿ, ಆಶ್ರಯ ಕಾಲೋನಿ, ಈದ್ಗ ರೋಡ್, ಟೀಚರ್ಸ್ ಕಾಲೋನಿ, ಜಾಗೃತಿ ನಗರ ಸರ್ಕಲ್, ಆಜಾದ್ ನಗರ ಸೇರಿದಂತೆ ಇನ್ನೂ ಮುಂತಾದ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಇ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ