ಮಂಗಳವಾರ, ಜುಲೈ 23, 2024

ಸಂಡೂರು: ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಜು.23(ಕರ್ನಾಟಕ ವಾರ್ತೆ): ಸಂಡೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ವಸತಿ ರಹಿತ ಲಿಂಗತ್ವ ಅಲ್ಪ ಸಂಖ್ಯಾತ ಫಲಾನುಭವಿಗಳಿಗೆ ದೇವರಾಜ ಅರಸು ವಸತಿ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಡೂರು ಪುರಸಭೆಯ ಮುಖ್ಯಾಧಿಕಾರಿ ಕೆ.ಜಯಣ್ಣ ಅವರು ತಿಳಿಸಿದ್ದಾರೆ. *ದಾಖಲೆಗಳು:* ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಕುಟುಂಬದವರ ಆಧಾರ್‍ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಫೋಟೋ ಒದಗಿಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿದ ಖಾಲಿ ನಿವೇಶನದ ಪ್ರಸಕ್ತ ಸಾಲಿನ ನಮೂನೆ-3ರ ನಕಲು ಪ್ರತಿ, ಮುಟೇಶನ್ ಪ್ರತಿ, ಕ್ರಯ ಪತ್ರ, ದಾನ ಪತ್ರದ ನಕಲು, ಪ್ರಸಕ್ತ ಸಾಲಿಗೆ ಇರುವಂತೆ 15 ವರ್ಷದ ಇಸಿ ದಾಖಲೆಗಳ ನಕಲು ಪ್ರತಿಗಳೊಂದಿಗೆ ಅರ್ಜಿ ನಮೂನೆ ನೀಡಬೇಕು. ಒಟ್ಟು 89 ಗುರಿಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸಂಡೂರು ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ