ಗುರುವಾರ, ಜುಲೈ 25, 2024
ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜು.೨೫(ಕರ್ನಾಟಕ ವಾರ್ತೆ):
ನಗರದ ತಾಳೂರು ರಸ್ತೆಯ ರಾಮನಗರದ ೨ನೇ ಕ್ರಾಸ್‌ನ ನಿವಾಸಿ ಹೂ ವ್ಯಾಪಾರ ಮಾಡುವ ಬಿ.ಗೋಪಿ ಎನ್ನುವ ೪೨ ವರ್ಷದ ಜೂ.೦೭ ರಂದು ಕಾಣೆಯಾಗಿರುವ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ ಗುರುತು: ಎತ್ತರ ೫.೬ ಅಡಿ, ಕೋಲು ಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ, ಕುತ್ತಿಗೆಗೆ ಮತ್ತು ಎಡ ಕೈಗೆ ದಪ್ಪನೆಯ ಕಪ್ಪು ಬಣ್ಣದ ದಾರ ಕಟ್ಟಿರುತ್ತಾನೆ. ಎದೆಯ ಮಧ್ಯಭಾಗದಲ್ಲಿ ಗಡ್ಡೆಯಂತಹ ಗಾಯ ಇರುತ್ತದೆ. ಎಡಕಿವಿಯ ಹಿಂದಿನ ಭಾಗದಲ್ಲಿ ಹಳೇ ಗಾಯದ ಗುರುತು ಇರುತ್ತದೆ.
ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ನೀಲಿ ಬಣ್ಣದ ಫುಲ್ ಶರ್ಟ್ ತೊಟ್ಟಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಮಾತನಾಡುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ಸಂ.೦೮೩೯೨-೨೫೮೧೦೦, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.೦೮೩೯೨-೨೭೬೪೬೧, ಮೊ.೯೪೮೦೮೦೩೦೪೯ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ