ಶನಿವಾರ, ಜುಲೈ 20, 2024

ರೈತರು ವಿವಿಧ ಕೃಷಿ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಲು ಸೂಚನೆ

ಬಳ್ಳಾರಿ,ಜು.20(ಕರ್ನಾಟಕ ವಾರ್ತೆ): ಬಳ್ಳಾರಿ ಹೋಬಳಿಯ ರೈತರು ಪ್ರಸ್ತಕ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಬಳ್ಳಾರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೇರಿ ಅವರು ತಿಳಿಸಿದ್ದಾರೆ. ನೋಂದಣಿಗೆ ಒಳಪಡುವ ಬೆಳೆಗಳು ಹಾಗೂ ನೋಂದಣಿಗೆ ಕೊನೆಯ ದಿನ: ನೀರಾವರಿಯ ಮುಸುಕಿನ ಜೋಳ(ಎಕರೆಗೆ 522 ರೂ.), ಮಳೆ ಆಶ್ರಿತ ಸೂರ್ಯಕಾಂತಿ(ಎಕರೆಗೆ 330 ರೂ.), ನೀರಾವರಿಯ ಹತ್ತಿ(ಎಕರೆಗೆ 1391 ಮಳೆಯಾಶ್ರಿತ ಹತ್ತಿ(ಎಕರೆಗೆ 1007 ರೂ.), ಬೆಳೆಗಗಳ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ. ನೀರಾವರಿಯ ಭತ್ತ(ಎಕರೆಗೆ 755 ರೂ.), ಮಳೆ ಆಶ್ರಿತ ಸಜ್ಜೆ(ಎಕರೆಗೆ 255ರೂ.), ಮಳೆ ಆಶ್ರಿತ ನವಣೆ(ಎಕರೆಗೆ 229 ರೂ.), ಮಳೆ ಆಶ್ರಿತ ತೊಗರಿ(ಎಕರೆಗೆ 389 ರೂ.),ಮಳೆ ಆಶ್ರಿತ ಹುರುಳಿ(ಎಕರೆಗೆ 166 ರೂ.), ಮಳೆ ಆಶ್ರಿತ ಶೇಂಗಾ(ಎಕರೆಗೆ 441 ರೂ.), ಬೆಳೆಗಳಿಗೆ ನೋಂದಣಿಯಾಗಲು ಆಗಸ್ಟ್ 16 ಕೊನೆಯ ದಿನಾಂಕವಾಗಿರುತ್ತದೆ. ಬೆಳೆ ವಿಮೆ ನೋಂದಣಿಗಾಗಿ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮಾ ಒನ್ ಕೇಂದ್ರ ಅಥವಾ ರೈತರು ತಮ್ಮ ವ್ಯವಹಾರದ ಬ್ಯಾಂಕ್‍ಗಳಿಗೆ ಸಂಪರ್ಕಿಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಹಳೆ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳ ಕಚೇರಿ ಅಥವಾ ಮೊ:8277930411 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ