ಮಂಗಳವಾರ, ಜುಲೈ 23, 2024
ಜು.25, 26 ರಂದು ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ
ಬಳ್ಳಾರಿ,ಜು.23(ಕರ್ನಾಟಕ ವಾರ್ತೆ):
ಜಿಲ್ಲೆಯ ಮಾಜಿ ಸೈನಿಕರು ಮತ್ತು ವೀರ ನಾರಿಯರ ಕಲ್ಯಾಣ ಸಮಿತಿ ವತಿಯಿಂದ 25 ನೇ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆಯ ಸಮಾರಂಭವನ್ನು ಜು.25 ಮತ್ತು 26 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜು.25 ರಂದು ಸಂಜೆ 06 ಗಂಟೆಗೆ ನಗರದ ಎಸ್‍ಪಿ ವೃತ್ತದಿಂದ ದುರ್ಗಮ್ಮ ಗುಡಿಯ ಮೂಲಕ ಎಸ್‍ಪಿ ಕಚೇರಿಯ ಮುಂಭಾಗದ ಅಮರ್ ಜವಾನ್ ಯುದ್ದ ಸ್ಮಾರಕದವರೆಗೆ ಮೇಣದ ಬತ್ತಿಯೊಂದಿಗೆ ಪಾದಯಾತ್ರೆ ನಡೆಸಿ, ಸ್ಮಾರಕಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಗುವುದು.
ಜು.26 ರಂದು ಬೆಳಿಗ್ಗೆ 09 ಗಂಟೆಗೆ ಎಸ್‍ಪಿ ಕಚೇರಿಯ ಮುಂಭಾಗದ ಅಮರ್ ಜವಾನ್ ಯುದ್ದ ಸ್ಮಾರಕಕ್ಕೆ ಗಣ್ಯರು, ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಸಾರ್ವಜನಿಕರಿಂದ ಪುಷ್ಪಗುಚ್ಛ ಮತ್ತು ಹೂವಿನ ಮಾಲಾರ್ಪಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ