ಸೋಮವಾರ, ಜುಲೈ 22, 2024
ವಿ.ಗಂಗೋತ್ರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ,ಜು.22(ಕರ್ನಾಟಕ ವಾರ್ತೆ):
ನಗರದ ಕೌಲ್‍ಬಜಾರ್ ಪ್ರದೇಶದ ಬಂಡಿಹಟ್ಟಿ ನಿವಾಸಿ ವಿ.ಗಂಗೋತ್ರಿ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿಯನ್ನು ಘೋಷಿಸಿದೆ.
ವಿ.ಗಂಗೋತ್ರಿ ಅವರು ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ತಿಪ್ಪೇಸ್ವಾಮಿ.ಹೆಚ್ ಅವರ ಮಾರ್ಗದರ್ಶನದಲ್ಲಿ ``ಗ್ರೇಟ್ ಮೆಟ್ರೋಪಾಲಿಟನ್ ಸಿಟಿ ಆಫ್ ಹಂಪಿ- ಹಿಸ್ಟಾರಿಕಲ್ ಸ್ಟಡಿ” ಎಂಬ ಶೀರ್ಷಿಕೆಯಡಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿಯನ್ನು ಘೋಷಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ