ಬುಧವಾರ, ಜುಲೈ 24, 2024

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ; ಪ್ರಥಮ ಪಿಯುಸಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜು.೨೪(ಕರ್ನಾಟಕ ವಾರ್ತೆ): ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಗರದ ಬೆಳಗಲ್ಲು ರಸ್ತೆಯ ಆಕಾಶವಾಣಿ ಹತ್ತಿರದ ಅಲ್ಪಸಂಖ್ಯಾತರ ಮೌಲನಾ ಆಜಾದ್ ಮಾದರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಪಿಯುಸಿ ೧೧ನೇ ತರಗತಿಗೆ (ಪಿಸಿಎಂಬಿ ವಿಜ್ಞಾನ ವಿಭಾಗ) ಉಚಿತ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬ ಹೊನಕಾಂಡೆ ಅವರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಜು.೩೦ ಕೊನೆಯ ದಿನಾಂಕವಾಗಿದೆ. ಅಲ್ಪಸಂಖ್ಯಾತರ ಸಮುದಾಯಕ್ಕೆ ಶೇ.೭೫ ಮತ್ತು ಇತರೆ ಸಮುದಾಯಕ್ಕೆ ಶೇ.೨೫ ರಷ್ಟು ಮೀಸಲಾತಿ ಇರುತ್ತದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಮತ್ತು ಪಾಲಕರುಗಳು ಕಾಲೇಜಿಗೆ ಭೇಟಿ ನೀಡಿ, ಅರ್ಜಿ ಪಡೆದು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ತಾಲ್ಲೂಕು ಮಾಹಿತಿ ಕೇಂದ್ರಗಳಿಂದ ಪಡೆಯಬಹುದು. ಮಾಹಿತಿಗಾಗಿ ನಗರದ ಬೆಳಗಲ್ಲು ರಸ್ತೆಯ ಆಕಾಶವಾಣಿ ಹತ್ತಿರದ ಅಲ್ಪಸಂಖ್ಯಾತರ ಮೌಲನಾ ಆಜಾದ್ ಮಾದರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಕಚೇರಿ ಅಥವಾ ಮೊ.೮೮೬೧೬೨೩೮೧೪, ಬಳ್ಳಾರಿ ಮಾಹಿತಿ ಕೇಂದ್ರ ಮೊ.೮೩೧೦೩೨೧೧೦೧, ಸಂಡೂರು ಮಾಹಿತಿ ಕೇಂದ್ರ ಮೊ.೯೦೩೬೯೨೫೯೬೬, ೮೬೬೦೫೭೫೦೬೧ ಸಿರುಗುಪ್ಪ ಮಾಹಿತಿ ಕೇಂದ್ರ ಮೊ.೯೧೪೮೮೮೯೯೭೫ ಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನ ಅಜಾದ ಭವನ ಜಿಲ್ಲಾ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿಗಳ ಕಚೇರಿ ಅಥವಾ ದೂ.೦೮೩೯೨-೨೦೦೧೨೫/೨೨೪ ಮತ್ತು ಸಹಾಯವಾಣಿ ಕೇಂದ್ರ ೨೪*೭ ಮೊ.೮೨೭೭೭೯೯೯೯೦ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ