ಶುಕ್ರವಾರ, ಜುಲೈ 26, 2024

ಜು.28 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜು.26(ಕರ್ನಾಟಕ ವಾರ್ತೆ): ನಗರದಲ್ಲಿ ವಿವಿಧೆಡೆ ಹಾನಿಯಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜು.28 ರಂದು ಬೆಳಿಗ್ಗೆ 09 ಗಂಟೆಯಿAದ 4 ಗಂಟೆಯವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-7 ಫೀಡರ್‌ನ ಸಂಗನಕಲ್ಲು ರಸ್ತೆ, ಎಸ್.ಎನ್.ಪೇಟ್ 3ನೇ ಕ್ರಾಸ್, ಜಿಲ್ಲಾಸ್ಪತ್ರೆ, ರಾಘವ ಕಲಾ ಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಾಂಪೌAಡ್, ರೂಪನಗುಡಿ ರಸ್ತೆ, ಮುಬರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ. ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಅಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರಪ್ಪ ಬೀದಿ, ತಾಯಮ್ಮ ಕಟ್ಟೆ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ