ಮಂಗಳವಾರ, ಜುಲೈ 30, 2024
ಜು.31 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜು.30(ಕರ್ನಾಟಕ ವಾರ್ತೆ):
ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಕುಡುತಿನಿ ಉಪ-ಕೇಂದ್ರದ ಆವರಣದಲ್ಲಿನ ಶಿಥಿಲಗೊಂಡ ಜೋಡಿ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ 110/11ಕೆ.ವಿ ಕುಡುತಿನಿ ವಿದ್ಯುತ್ ಉಪಕೇಂದ್ರದಿAದ ವಿದ್ಯುತ್ ಸರಬರಾಜುವಾಗುವ 11ಕೆ.ವಿ ಮಾರ್ಗಗಳಲ್ಲಿ ಜು.31 ರಂದು ಬೆಳಿಗ್ಗೆ 08 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸÀಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು*
ಎಫ್-6 ದರೋಜಿ ಐ.ಪಿ ಮಾರ್ಗದ ಏಳುಬೆಂಚಿ, ಸಿದ್ದಮ್ಮನಹಳ್ಳಿ, ರ‍್ರಂಗಳಿ, ಬಸವಣ್ಣ ಕ್ಯಾಂಪ್, ಭೂಲಕ್ಷಿö್ಮ ಕ್ಯಾಂಪ್ ಕೃಷಿ ಪ್ರದೇಶಗಳು. ಎಫ್-2 ತಿಮ್ಮಲಾಪುರ ಎನ್.ಜೆ.ವೈ ಮಾರ್ಗದ ಸಿದ್ದಮ್ಮನಹಳ್ಳಿ ತಿಮ್ಮಲಾಪುರ, ಏಳುಬೆಂಜಿ, ಬಸವಣ್ಣ ಕ್ಯಾಂಪ್ ಗ್ರಾಮಗಳು.
ಎಫ್-3 400 ಕೆಪಿಟಿಸಿಎಲ್ ಮತ್ತು ಬಿಟಿಪಿಎಸ್ ಮಾರ್ಗದ 400 ಕೆವಿಎ ಬಿಪಿಎಸ್ ಕುಡುತಿನಿ. ಎಫ್-4 ಕುಡುತಿನಿ ನಗರ ಮಾರ್ಗದ ಕುಡುತಿನಿ ನಗರ, ವೇಣಿವೀರಾಪುರ ಗ್ರಾಮಗಳು.
ಎಫ್-5 ವೇಣಿ ವೀರಾಪುರ ಕೈಗಾರಿಕೆ ಪ್ರದೇಶ ಮಾರ್ಗದ ವೇಣಿ ವೀರಾಪುರ ಕೈಗಾರಿಕೆ ಪ್ರದೇಶ ಸೇರಿದಂತೆ ಇನ್ನೂ ಮುಂತಾದ ಕಡೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ