ಬುಧವಾರ, ಜುಲೈ 24, 2024

ಜು.೨೬ ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜು.೨೪(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಕುಡುತಿನಿ ಉಪ-ಕೇಂದ್ರದ ಆವರಣದಲ್ಲಿರುವ ಶಿಥಿಲಗೊಂಡ ಜೋಡಿ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜು.೨೬ ರಂದು ಬೆಳಿಗ್ಗೆ ೦೮ ಗಂಟೆಯಿಂದ ಸಂಜೆ ೦೬ ಗಂಟೆಯವರೆಗೆ ೧೧೦/೧೧ಕೆ.ವಿ ಕುಡುತಿನಿ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು*: ಎಫ್-೬ ದರೋಜಿ ಐ.ಪಿ ಮಾರ್ಗದ ಏಳುಬೆಂಚಿ, ಸಿದ್ದಮ್ಮನಹಳ್ಳಿ, ರ‍್ರಂಗಳಿ, ಬಸವಣ್ಣ ಕ್ಯಾಂಪ್, ಭೂಲಕ್ಷ್ಮಿ ಕ್ಯಾಂಪ್, ಕೃಷಿ ಪ್ರದೇಶಗಳು. ಎಫ್-೨ ತಿಮ್ಮಲಾಪುರ ಎನ್.ಜೆ.ವೈ ಮಾರ್ಗದ ಸಿದ್ದಮ್ಮನಹಳ್ಳಿ ತಿಮ್ಮಲಾಪುರ, ಏಳುಬೆಂಜಿ, ಬಸವಣ್ಣ ಕ್ಯಾಂಪ್ ಗ್ರಾಮಗಳು. ಎಫ್-೩ ೪೦೦ ಕೆಪಿಟಿಸಿಎಲ್ ಮತ್ತು ಬಿಪಿಎಸ್ ಮಾರ್ಗದ ೪೦೦ ಕೆ.ವಿ.ಎ ಬಿ.ಪಿ.ಎಸ್ ಕುಡುತಿನಿ. ಎಫ್-೪ ಕುಡುತಿನಿ ನಗರ ಮಾರ್ಗದ ಕುಡುತಿನಿ ನಗರ, ವೇಣಿವೀರಾಪುರ ಗ್ರಾಮಗಳು. ಎಫ್-೫ ವೇಣಿ ವೀರಾಪುರ ಕೈಗಾರಿಕೆ ಪ್ರದೇಶ ಮಾರ್ಗದ ವೇಣಿವೀರಾಪುರ ಕೈಗಾರಿಕೆ ಪ್ರದೇಶ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ