ಮಂಗಳವಾರ, ಜುಲೈ 30, 2024
ರೂಪ್‌ಚಂದ್ ಮೀನು ಸಾಕಾಣಿಕೆ ಮಾಡುವವರು ತಪ್ಪದೇ ಮೀನುಗಾರಿಕೆ ಇಲಾಖೆಯಿಂದ ಅನುಮತಿ ಪಡೆಯಬೇಕು
ಬಳ್ಳಾರಿ,ಜು.30(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ರೂಪ್‌ಚಂದ್ ಮೀನು ಸಾಕಾಣಿಕೆ ಮಾಡಬಯಸುವ ಪ್ರತಿಯೊಬ್ಬ ರೈತರು ಮತ್ತು ಮೀನು ಕೃಷಿಕರು ಮೀನುಗಾರಿಕೆ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಿರುಗುಪ್ಪ, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕುಗಳಲ್ಲಿ ಕೆಲವು ವ್ಯಕ್ತಿಗಳು ಸರ್ಕಾರಿ, ಪರಂಪೋಕು ಜಮೀನಿನಲ್ಲಿ ಕೊಳಗಳನ್ನು ನಿರ್ಮಿಸಿಕೊಂಡು ಅನಧಿಕೃತವಾಗಿ ರೂಪ್ ಚಂದ್ ಮೀನು ಸಾಕಾಣಿಕೆ ಮಾಡುತ್ತಿರುವುದು ಮತ್ತು ಕೊಳಗಳಲ್ಲಿ ಚಿಕನ್ ವೇಸ್ಟ್, ಸತ್ತ ಕೋಳಿ, ಕೊಳೆತ ಮೊಟ್ಟೆ, ಇತ್ಯಾದಿ ನಿಷೇಧಿತ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬAದಿದೆ.
ಒAದು ವೇಳೆ ಯಾರಾದರೂ ಮೀನು ಕೃಷಿ ಕೊಳಗಳಲ್ಲಿ ನಿಷೇಧಿತ ಆಹಾರ ಪದಾರ್ಥಗಳನ್ನು ರೂಪ್ ಚಂದ್ ಮೀನುಗಳಿಗೆ ಆಹಾರವನ್ನಾಗಿ ಬಳಸುತ್ತಿರುವುದು ಕಂಡುಬAದರೆ ಮೊ.9449593156 ಗೆ ಕರೆ ಮಾಡಿ ತಿಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ