ಬುಧವಾರ, ಆಗಸ್ಟ್ 7, 2024

ಆ.08 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಆ.07(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ವ್ಯಾಪ್ತಿಯ ಎಫ್-1 ಫೀಡರ್‌ನಲ್ಲಿ ಹೊಸ ವಿದ್ಯುತ್ ಪರಿವರ್ತಕ ಅಳಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಆ.08 ರಂದು ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ಎಫ್-1 ಫೀಡರ್‌ನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-1 ಫೀಡರ್‌ನÀ ಕಪ್ಪಗಲ್ಲು ರಸ್ತೆ, ಸಿದ್ದಾರ್ಥ ನಗರ ಕಾಲೋನಿ, ಹೌಸಿಂಗ್ ಬೋರ್ಡ್, ಬೀಚಿನಗರ, ಕೆಇಬಿ. ಕ್ವಾಟರ್ಸ್, ಭಗತ್‌ಸಿಂಗ್ ನಗರ, ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸಿ ಸ್ಟ್ರೀಟ್, ಬಾಲಾಜಿ ನರ್ಸಿಂಗ್ ಹೋಮ್, ಲಾ ಕಾಲೇಜು, ಮುಲ್ಲಂಗಿ ಲೇಔಟ್, ಕನಕದುರ್ಗ ಲೇಔಟ್, ಡ್ರೀಮ್‌ವರ್ಲ್ಡ್ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ