ಶುಕ್ರವಾರ, ಆಗಸ್ಟ್ 16, 2024

ಸಿರುಗುಪ್ಪ: ಆ.17 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಆ.16(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ತೆಕ್ಕಲಕೋಟೆಯ ತುರ್ತು ನಿರ್ವಾಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಆ.17 ಬೆಳಿಗ್ಗೆ 11 ಗಂಟೆಯಿAದ ಸಂಜೆ 06 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-9 ಹೆರಕಲ್ ಐಪಿ ಮಾರ್ಗ, ಎಫ್-10 ಬೈರಾಪುರ ಐಪಿ ಮಾರ್ಗ, ಎಫ್-5 ಬೂದುಗುಪ್ಪ ಐಪಿ ಮಾರ್ಗ ಮತ್ತು ಎಫ್-7 ಕೆ.ಬೆಳಗಲ್ ಐಪಿ ಮಾರ್ಗ ಮತ್ತು ಎಫ್-6 ಹಳೇಕೋಟೆ ನಿರಂತರ ಜ್ಯೋತಿ ಮತ್ತು ಎಫ್-8 ಬಲಕುಂದಿ ನಿರಂತರ ಜ್ಯೋತಿ ಮಾರ್ಗಗಳ ವಿದ್ಯುತ್ ಸಂಪರ್ಕದಲ್ಲಿ ಮತ್ತು ತೆಕ್ಕಲಕೋಟೆ ಪಟ್ಟಣ ಮತ್ತು ಸುತ್ತಮುತ್ತಲಿನ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ. ಸೂಚನೆ: ತುರ್ತು ನಿರ್ವಾಹಣೆ ಕಾರ್ಯ ಮುಗಿಯುವವರೆಗೂ ಅಥವಾ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇದ್ದು, ವಿದ್ಯುತ್ ಗ್ರಾಹಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸಗಳನ್ನು ಮಾಡಬಾರದು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ