ಶನಿವಾರ, ಆಗಸ್ಟ್ 17, 2024
ಮೀನುಗಾರಿಕೆ ಇಲಾಖೆ; ಮೀನು ಪಾಶುವಾರು ಗುತ್ತಿಗೆಗೆ ಅರ್ಜಿ ಆಹ್ವಾನ
ಬಳ್ಳಾರಿ,ಆ.17(ಕರ್ನಾಟಕ ವಾರ್ತೆ):
ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಸಂಡೂರು ತಾಲ್ಲೂಕಿನ ವಿವಿಧ ಕೆರೆಗಳ ಮೀನು ಪಾಶುವಾರು ಹಕ್ಕನ್ನು ಐದು ವರ್ಷಗಳ ಕಾಲ ನೇರಗುತ್ತಿಗೆ ಮೂಲಕ ವಿಲೇವಾರಿ ಮಾಡಲು ಅರ್ಹ ಮೀನುಗಾರರ ಸಹಕಾರ ಸಂಘ ಹಾಗೂ ಮೀನು ರೈತ ಉತ್ಪಾದಕರ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಡೂರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
*ಸಂಡೂರು ತಾಲ್ಲೂಕಿನ ಅರ್ಹ ಕೆರೆಗಳು*
ಜಲ ಸಂಪನ್ಮೂಲಗಳಾದ ಎಂ.ಲಕ್ಕಲಹಳ್ಳಿ ಕೆರೆ, ಹುಲಿಕುಂಟಾ ಕೆರೆ, ಜಿಗೇನಹಳ್ಳಿ ಸಣ್ಣ ಕೆರೆ, ಶಿವಪುರ ಪ್ಯಾಲೇಸ್ ಕೆರೆ, ಚಿಕ್ಕ ಕೆರೆಯಾಗಿನಹಳ್ಳಿ ಕೆರೆ, ಅಂಕಮ್ಮನಹಾಳ್ ಕೆರೆ, ಎಸ್.ಹುಲಿಕುಂಟಾ ಕೆರೆ, ರಾಘವಪುರ ಕೆರೆಗಳು.
ಆಸಕ್ತ ಅರ್ಹ ಮೀನುಗಾರರ ಸಹಕಾರ ಸಂಘ ಹಾಗೂ ಮೀನು ರೈತ ಉತ್ಪಾದಕರ ಸಂಸ್ಥೆಗಳು ಆ.23ರೊಳಗಾಗಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಡೂರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ