ಶುಕ್ರವಾರ, ಆಗಸ್ಟ್ 16, 2024

ಅನಾಮದೇಯ ಮೃತದೇಹ ಪತ್ತೆ; ವಾರಸುದಾರರ ಪತ್ತೆೆಗೆ ಮನವಿ

ಬಳ್ಳಾರಿ, ಆ.16(ಕರ್ನಾಟಕ ವಾರ್ತೆ): ನಗರ ರೈಲ್ವೆ ನಿಲ್ದಾಣ ವೇದಿಕೆ ಮೂರರ ರೋಡ್ ನಂಬರ್ 5ರಲ್ಲಿ ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿಯ ಜೀವನದಲ್ಲಿ ಜಿಗುಪ್ಸೆಗೊಂಡು ಆ.16 ರಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ತನಿಖಾಧಿಕಾರಿ ಅವರು ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ 5.5 ಅಡಿ, ದುಂಡು ಮುಖ, ದಪ್ಪ ಮೂಗು, ಗೋಧಿ ಮೈ ಬಣ್ಣ, ಸಾಧರಣ ಮೈ ಕಟ್ಟು ಇದ್ದುಮ ತಲೆಯಲ್ಲಿ ಸುಮಾರು 2 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು, ಬಿಳಿ ಮಿಶ್ರಿತ ಕಪ್ಪು ಮೀಸೆ ಮತ್ತು ಗಡ್ಡ ಬಿಟ್ಟಿರಿತ್ತಾನೆ. ಬಲಗೈ ಮೊಣಕೈ ಮುಂದೆ ಬೆಟ್ಟೆ ಎತ್ತಿ ಹಿಡಿದ ಆಂಜನೇಯ ದೇವರ ಹಚ್ಚೆ ಗುರುತು ಇದ್ದು, ಕೊರಳಲ್ಲಿ ಕಪ್ಪು ಬಣ್ಣದ ದಾರ ಮತ್ತು ರುಧ್ರಾಕ್ಷಿ ಹಾಗೂ ಸೊಂಟಕ್ಕೆ ಕೆಂಪು ಬಣ್ಣದ ಉಡಿದಾರ ಇರುತ್ತದೆ. ಮೃತ ದೇಹದ ಮೇಲೆ ಬಿಳಿ ಬಣ್ಣದ ಗೆರೆಗಳುಳ್ಳ ಆಫ್ ಶರ್ಟ್, ಹಸಿರು ಬಣ್ಣದ ಅಂಡರ್ ವೇರ್, ಬೂದು ಬಣ್ಣದ ಪ್ಯಾಂಟ್ ಇದ್ದು, ಕಪ್ಪು ಕೆಂಪು ಮಿಶ್ರಿತ ಸ್ಯಾಂಡಲ್ ಚಪ್ಪಲಿ ಇರುತ್ತವೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ:9480802131 ಅಥವಾ ರಾಯಚೂರು ರೈಲ್ವೆ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮೊ:9480800471 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ