ಗುರುವಾರ, ಆಗಸ್ಟ್ 8, 2024

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಆ.08(ಕರ್ನಾಟಕ ವಾರ್ತೆ): ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ನ ಬೆಂಚ್ ಮೇಲೆ ಅಂದಾಜು 35 ರಿಂದ 40 ವರ್ಷದ ಅನಾಮದೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಆರಕ್ಷಕರು ಉಪ ನಿರೀಕ್ಷಕರು ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 5.4 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೃತನ ತಲೆಯಲ್ಲಿ ಕೂದಲು ಇರುವುದಿಲ್ಲ ಬೋಡು ಗುಂಡು ಇರುತ್ತದೆ. ಮೃತನ ದೇಹದ ಮೇಲೆ ಬಿಳಿ ಮತ್ತು ನೀಲಿ ಬಣ್ಣದ ಡಿಜೈನ್ ಟೀಶರ್ಟ್ ಮತ್ತು ಹಸಿರು, ಹಳದಿ ಬಣ್ಣದ ಪ್ರಿಂಟೆಡ್ ಪಂಚೆ ಇರುತ್ತದೆ. ಈ ಮೇಲ್ಕಂಡ ಮೃತನ ಚಹರೆ ಗುರುತುಗಳುಳ್ಳ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ: 08392-258100, ಗಾಂಧಿನಗರ ಪೊಲೀಸ್ ಠಾಣೆ ದೂ:08392-272192, ಪಿ.ಐ ಮೊ:9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ