ಶುಕ್ರವಾರ, ಆಗಸ್ಟ್ 16, 2024
ಅನಾಮಧೇಯ ಮೃತ ದೇಹ ಪತ್ತೆ; ವಾರುಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಆ.16(ಕರ್ನಾಟಕ ವಾರ್ತೆ)
ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುರೇಕುಪ್ಪ ಬಳಿಯ ಇರ್ಫಾನ್ ಆಲಂ ಗ್ಯಾಸ್ ವೆಲ್ಡಿಂಗ್ ಶಾಪ್ ಮುಂಭಾಗ ಅಂದಾಜು 25 ವರ್ಷದ ಅನಾಮಧೇಯ ಮೃತದೇಹ ಆ.15 ರಂದು ದೊರೆತಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಸಂಡೂರು ಪೊಲೀಸ್ ಠಾಣೆ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರು ಮನವಿ ಮಾಡಿದ್ದಾರೆ.
ಮೃತನ ಚಹರೆ:
ಎತ್ತರ 5.2 ಅಡಿ, ದುಂಡು ಮುಖ, ಗೋದಿ ಮೈಬಣ್ಣ ಸಾಧಾರಣ ಮೈಕಟ್ಟು ಇದ್ದು, ತಲೆಯಲ್ಲಿ ಎರಡು ಇಂಚು ಕಪ್ಪು ಕೂದಲು ಇರುತ್ತದೆ. ಮೃತನ ದೇಹದ ಮೇಲೆ ನೀಲಿ ಬಣ್ಣದ ಆಫ್ ಟೀ ಶರ್ಟ್, ಮತ್ತು ಕಂದು ಬಣ್ಣದ ಸಣ್ಣ ಚುಕ್ಕೆಗಳುಳ್ಳ ನಿಕ್ಕರ್ ಇರುತ್ತದೆ.
ಈ ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ: 08392-258100 ಅಥವಾ ಸಂಡೂರು ಪೊಲೀಸ್ ಠಾಣೆಯ ಸಿಪಿಐ ಮೊ:9480803063 ಇವರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ